ಉಡುಪಿಯಲ್ಲಿ ವ್ಯಾಸಂಗ ಮಾಡುವ ಹೊರಗಿನ ವಿದ್ಯಾರ್ಥಿಗಳಿಗೂ ಇಲ್ಲೇ ಲಸಿಕೆ

Covid 11
Published on

ಉಡುಪಿ: ಜಿಲ್ಲೆಯಲ್ಲಿ ವಾಸ್ತವ್ಯ ಹೊಂದಿ ಇತರ ಜಿಲ್ಲೆ, ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾಸ್ತವ್ಯ ಹೊಂದಿರುವ ಉಡುಪಿ ಜಿಲ್ಲೆಯಲ್ಲಿಯೇ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಬಗ್ಗೆ ವಿವರಗಳನ್ನು ಸಂಗ್ರಹಿಸುವುದು ಅವಶ್ಯಕವಾಗಿದ್ದು, ಕೋವಿಡ್19 ಲಸಿಕೆ ಪಡೆಯಲಿಚ್ಛಿಸುವ ಉಡುಪಿ ಜಿಲ್ಲೆಯಲ್ಲಿ ವಾಸ್ತವ್ಯಹೊಂದಿ ವ್ಯಾಸಂಗ ಮಾಡುತ್ತಿರುವ ಅನ್ಯ ಜಿಲ್ಲೆ, ರಾಜ್ಯಗಳ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಈ ಲಿಂಕ್‌ನಲ್ಲಿ https://docs.google.com/forms/d/e/1FAIpQLScLntiRTE7JnvnT-AwcllzmrrLCZe2aCkN_gu3U13VcnG8cug/viewform ಭರ್ತಿ ಮಾಡಲು ಕೋರಲಾಗಿದೆ. ಲಸಿಕೆ ಲಭ್ಯತೆ ಮುಂದಿನ ದಿನಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗುವುದು ಎಂದು ಡಿಸಿ ಜಿ.ಜಗದೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net