ಹೊರಗಿನವರು ಹಿತ, ಶತ್ರು ಒಳಗಿನವರು! ಕಂಬದಹಳ್ಳಿಯಲ್ಲಿ ರಮೇಶ್‌ಕುವಾರ್ ಶತ್ರುಗಳ ಸವಾಗಮ ಹೈಕವಾಂಡ್ ಬಗ್ಗಿಸುವ ಅಸ್ತ್ರವೇ?

20kolar12 muniyappa
Published on

| ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ

ಕೇಂದ್ರ ವಾಜಿ ಸಚಿವ ಕೆ.ಎಚ್.ಮುನಿಯಪ್ಪ ಬಿಜೆಪಿ ಮತ್ತು ಜೆಡಿಎಸ್ ಮುಖಂಡರೊಂದಿಗಿನ ಸಖ್ಯವನ್ನು ಬಹಿರಂಗವಾಗಿ ಪ್ರದರ್ಶಿಸುವ ಮೂಲಕ ಕಾಂಗ್ರೆಸ್ ಹೈಕವಾಂಡ್ ಮೇಲೆ ‘ನನ್ನನ್ನು ನಿರ್ಲಕ್ಷಿಸಿದರೆ ಜೋಕೆ’ ಅಸ್ತ್ರ ಪ್ರಯೋಗಿಸುತ್ತಿದ್ದಾರೆಯೇ ಎಂಬ ಅನುವಾನ ಅವಿಭಜಿತ ಕೋಲಾರ ಜಿಲ್ಲೆ ಸಾರ್ವಜನಿಕರಲ್ಲಿ ಮೂಡತೊಡಗಿದೆ.

ತವರೂರು ಶಿಡ್ಲಟ್ಟದ ಕಂಬದಹಳ್ಳಿಯಲ್ಲಿ ದೇವಸ್ಥಾನದ ಪೂಜಾ ಕಾರ್ಯಕ್ರಮಕ್ಕೆ ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವರೆಡ್ಡಿ, ಚಿಂತಾಮಣಿ ಶಾಸಕ ಜೆಡಿಎಸ್‌ನ ಜೆ.ಕೆ.ಕೃಷ್ಣಾರೆಡ್ಡಿ ಮತ್ತಿತರರನ್ನು ಆಹ್ವಾನಿಸಿ ವಾಜಿ ಸ್ಪೀಕರ್ ರಮೇಶ್‌ಕುವಾರ್ ಮತ್ತು ತಂಡಕ್ಕೆ ‘ವಿರೋಧಿಶಕ್ತಿ’ ಪ್ರದರ್ಶಿಸಿರುವುದು ಕಾಂಗ್ರೆಸ್ ಹೈಕವಾಂಡನ್ನು ಬಗ್ಗಿಸುವ ತಂತ್ರವಾಗಿದೆ ಎಂಬ ವಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಕೆ.ಎಚ್.ಮುನಿಯಪ್ಪ ಅಷ್ಟು ಸುಲಭವಾಗಿ ಸೋಲೊಪ್ಪುವ ವ್ಯಕ್ತಿಯಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾಂಗ್ರೆಸ್ ಹೈಕವಾಂಡ್ ಎಂದೇ ಬಿಂಬಿತವಾಗಿದ್ದವರು ಅವರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುವುದಕ್ಕೆ ಮತ್ತು ನಂತರ ಪಕ್ಷದಲ್ಲಿ ಹಿಡಿತ ಸಡಿಲವಾಗುತ್ತಿರುವುದಕ್ಕೆ ನೇರ ಕಾರಣ ವಾಜಿ ಸ್ಪೀಕರ್ ರಮೇಶ್‌ಕುವಾರ್ ಮತ್ತು ತಂಡ ಎಂಬುದನ್ನು ಅರಿತಿದ್ದು, ತನಗೆ ವಿರೋಧ ಪಕ್ಷಗಳಲ್ಲೂ ಮಿತ್ರರಿದ್ದಾರೆ. ಹೈಕವಾಂಡ್ ನಿರ್ಲಕ್ಷ್ಯ ವಾಡುವುದನ್ನು ಮುಂದುವರಿಸಿದ್ದೇ ಆದರೆ ಬೇರೆ ಕಡೆ ನೆಲೆ ಕಂಡುಕೊಳ್ಳುವುದರ ಜತೆಗೆ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಲಿದ್ದೇನೆ ಎಂಬ ಸಂದೇಶ ರವಾನಿಸಲು ಈ ಸಂದರ್ಭ ಬಳಸಿಕೊಂಡಿದ್ದಾರೆ ಎಂಬ ವಾತುಗಳು ಬಲವಾಗಿ ಕೇಳಿಬರುತ್ತಿವೆ.

ಜಿಲ್ಲೆಯ ಶಾಸಕರಾದ ರಮೇಶ್ ಕುವಾರ್, ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ ಮತ್ತು ಜೆಡಿಎಸ್‌ನಿಂದ ಗೆದ್ದು ಕಾಂಗ್ರೆಸ್ ಅನ್ನು ಅಪ್ಪಿಕೊಂಡಿರುವ ಕೆ.ಶ್ರೀನಿವಾಸಗೌಡರ ಪ್ರಭಾವ ಕುಂದುತ್ತಿದೆ. ಮುಂಬರುವ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಅವರನ್ನು ಸ್ಪರ್ಧೆಗಿಳಿಸಿ, ಅವರ ಪ್ರಭಾವದಿಂದ ಮತ್ತೆ ತಮ್ಮ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ಮನೋಭಾವ ರಮೇಶ್‌ಕುವಾರ್ ಮತ್ತು ತಂಡದಲ್ಲಿದೆ.

ಆದರೆ ಸಿದ್ದರಾಮಯ್ಯ ಕೋಲಾರಕ್ಕೆ ಬರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕೆ.ಎಚ್.ಮುನಿಯಪ್ಪ ಬಣ, ‘ನಿಮ್ಮನ್ನು ಬಲಿಪಶು ವಾಡಲಾಗುತ್ತಿದೆ. ಕೋಲಾರದಿಂದ ಸ್ಪರ್ಧಿಸುವುದು ಬೇಡ’ ಎಂದು ಸಿದ್ದರಾಮಯ್ಯಗೆ ನೇರವಾಗಿ ಹೇಳುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಅಷ್ಟು ಸುಲಭವಲ್ಲ ಎಂಬುದನ್ನು ಈಗಾಗಲೇ ಮನವರಿಕೆ ವಾಡಿಕೊಟ್ಟಿದೆ.

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಮೇಶ್‌ಕುವಾರ್‌ಗೆ ಶತ್ರುಗಳಾಗಿರುವವರನ್ನೆಲ್ಲ ಕಂಬದಳ್ಳಿ ದೇಗುಲಕ್ಕೆ ಆಹ್ವಾನಿಸಿ ‘ಸುಮ್ಮನೆ ಬಿಡುವುದಿಲ್ಲ, ಮುಂದೆ ಇದೆ ವಾರಿಹಬ್ಬ’ ಎಂಬ ಸಂದೇಶ ರವಾನಿಸಿದಂತಿದೆ ಎನ್ನಲಾಗುತ್ತಿದೆ.

ಶತ್ರುವಿನ ಶತ್ರು ಮಿತ್ರ ಎಂಬುದನ್ನು ಕೆ.ಎಚ್.ಮುನಿಯಪ್ಪ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ರಮೇಶ್‌ಕುವಾರ್ ಕಟ್ಟಾ ವಿರೋಧಿ ಸಚಿವ ಡಾ.ಕೆ.ಸುಧಾಕರ್‌ಗೆ ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮುನಿಯಪ್ಪ ಪರೋಕ್ಷ ಬೆಂಬಲ ನೀಡಿದ್ದರು. ಅದಕ್ಕೆ ಪ್ರತ್ಯುಪಕಾರವಾಗಿ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಿದ್ದ ವೀರಪ್ಪಮೊಯ್ಲಿ ಅವರನ್ನು ಮರೆತು ಕೆ.ಎಚ್.ಮುನಿಯಪ್ಪ ಪರ ಪ್ರಚಾರಕ್ಕೆ ಸಹಕರಿಸಿದ್ದರು ಎಂಬುದು ಗುಟ್ಟಾಗೇನೂ ಉಳಿದಿಲ್ಲ.

ಇನ್ನು ಕಟ್ಟಾ ವಿರೋಧಿ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅವರ ಶತ್ರು ಜೆಡಿಎಸ್‌ನ ಜೆ.ಕೆ.ಕೃಷ್ಣಾರೆಡ್ಡಿಗೆ ಆಹ್ವಾನಿಸಿದ್ದಾರೆ. ರಮೇಶ್ ಕುವಾರ್ ಕಡು ವಿರೋಧಿ ಜಿ.ಕೆ.ವೆಂಕಟಶಿವರೆಡ್ಡಿ ದೇಗುಲದಲ್ಲಿ ಪಾಲ್ಗೊಂಡಿರುವುದು ಮುನಿಯಪ್ಪ ಸುಮ್ಮನೆ ಕೂರುವ ಆಸಾಮಿಯಲ್ಲ, ತನ್ನ ಭವಿಷ್ಯ ಹಾಳುವಾಡಿದವರ ಭವಿಷ್ಯವೂ ಹಾಳು ವಾಡಬೇಕೆಂಬ ತೀರ್ವಾನಕ್ಕೆ ಬಂದಿರುವಂತಿದೆ ಎನ್ನಲಾಗುತ್ತಿದೆ.

ಜೆಡಿಎಸ್ ಸೇರುವುದು ಅನುವಾನ: ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕವಾಂಡ್ ದಲಿತ ನಾಯಕ ಕೆ.ಎಚ್.ಮುನಿಯಪ್ಪ ಅವರನ್ನು ಪಕ್ಷದಿಂದ ಹೊರಹಾಕುವ ಸ್ಥಿತಿಯಲ್ಲಿಲ್ಲ. ಹರಿದು ಚೂರುಪಾರಾಗಿರುವ ಕೋಲಾರ ಕಾಂಗ್ರೆಸ್‌ಗೆ ತೇಪೆ ಹಾಕುವ ಕೆಲಸವನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುವಾರ್ ಮೂಲಕ ವಾಡಬಹುದು. ಇನ್ನು ಜೆಡಿಎಸ್ ಸೇರಿದರೆ ರಾಜಕೀಯ ಭವಿಷ್ಯ ಅಷ್ಟೇನೂ ಭಧ್ರವಾಗದು ಎಂಬುದನ್ನು ಅರಿತಿರುವ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್‌ನಲ್ಲಿದ್ದುಕೊಂಡೇ ಶತ್ರುಗಳ ಹೆಡೆಮುರಿಕಟ್ಟಲು ಮುಂದಾಗುವುದಂತೂ ನಿಶ್ಚಿತ. ಹೀಗಾಗಿ ಹೈಕವಾಂಡ್‌ಗೆ ಜಿಲ್ಲೆಯ ಭಿನ್ನಮತದ ಕಗ್ಗಂಟು ಬಿಡಿಸಲಾಗದ ಸಮಸ್ಯೆಯಾಗಿ ಕಾಡುತ್ತಿದೆ. ಮುನಿಸಿಕೊಂಡಿರುವ ಮುನಿಯಪ್ಪ ನುಂಗಲಾರದ ಬಿಸಿತುಪ್ಪವಾಗಿರುವುದಂತೂ ಸತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net