ಹೊರಗಡೆ ಔಷಧ ತರಲು ತಿಳಿಸದಿರಿ

19. HBH. 1
ಹಗರಿಬೊಮ್ಮನಹಳ್ಳಿಯ ತಾಲೂಕು ಆಸ್ಪತ್ರೆಗೆ ಡಿಸಿ ಎಂ.ಎಸ್.ದಿವಾಕರ ಭೇಟಿ ನೀಡಿ ಪರಿಶೀಲಿಸಿದರು. ಟಿಎಚ್‌ಒ ಡಾ.ಎಚ್.ಎಂ.ಪ್ರವೀಣ್, ಆಸ್ಪತ್ರೆ ಆಡಳಿತಾಧಿಕಾರಿ ಅಚ್ಯುತ್‌ರಾವ್, ವೈದ್ಯ ವಿನಾಯಕ, ಮಕ್ಕಳ ತಜ್ಞ ತಿಪ್ಪೇಸ್ವಾಮಿ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಇಲ್ಲಿನ ತಾಲೂಕು ಆಸ್ಪತ್ರೆಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು.

ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು ಹಾಗೂ ಮಧ್ಯಮ ವರ್ಗದವರು. ಹೊರಗಡೆಯಿಂದ ಔಷಧ ತರಲು ತಿಳಿಸದೆ, ನಿಮಗೆ ಅಗತ್ಯವಿರುವ ಔಷಧಗಳ ಬಗ್ಗೆ ಬೇಡಿಕೆ ಸಲ್ಲಿಸಿ, ಪೂರೈಸುವುದು ನಮ್ಮ ಹೊಣೆ ಎಂದು ಡಿಸಿ ತಿಳಿಸಿದರು.

ಬಳಿಕ ಪ್ರತಿ ವಾರ್ಡ್‌ಗೆ ತೆರಳಿ ಪರಿಶೀಲಿಸಿದರು. ಲ್ಯಾಬ್‌ಗಳಿಗೂ ಭೇಟಿ ನೀಡಿ ಅಲ್ಲಿಯ ರೋಗಿಗಳೊಂದಿಗೆ ಸಮಾಲೋಚಿಸಿ, ಕೊರತೆ ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಗೆ ಇನ್ನೂ ಅಗತ್ಯವಿರುವ ವೈದ್ಯರನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದರು.

ನಕಲಿ ವೈದ್ಯರ ಹಾವಳಿ ಬಗ್ಗೆ ಜಾಗೃತಿ ಇರಲಿ. ಇಲಾಖೆಯೊಂದಿಗೆ ಸಹಕರಿಸಿದರೆ ನಕಲಿ ವೈದ್ಯರನ್ನು ನಿಯಂತ್ರಿಸುವ ಕೆಲಸ ಮಾಡಲಾಗುವುದು ದಿವಾಕರ ತಿಳಿಸಿದರು. ಟಿಎಚ್‌ಒ ಡಾ.ಎಚ್.ಎಂ.ಪ್ರವೀಣ್, ಆಸ್ಪತ್ರೆ ಆಡಳಿತಾಧಿಕಾರಿ ಅಚ್ಯುತ್‌ರಾವ್, ವೈದ್ಯ ವಿನಾಯಕ, ಮಕ್ಕಳ ತಜ್ಞ ತಿಪ್ಪೇಸ್ವಾಮಿ, ಆಪ್ತ ಸಮಾಲೋಚಕ ಅಶೋಕ ನಾಯ್ಕ, ಸಿಬ್ಬಂದಿ ನಿಜಲಿಂಗಪ್ಪ, ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net