ಕಾಫಿಗಿಡ ಕಿತ್ತು ಹಾಕಿದ್ದಕ್ಕೆ ಆಕ್ರೋಶ

ald-1 (4)
Published on

ಆಲ್ದೂರು: ಆಲ್ದೂರು ಸಮೀಪದ ಆವತಿ ಹೋಬಳಿಯ ಹೊಸಳ್ಳಿ ಗ್ರಾಮದ ಗಂಗಮ್ಮ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ಕಾಫಿ ಗಿಡಗಳನ್ನು ಕಿತ್ತುಹಾಕಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಕಾಫಿ ತೋಟಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಡಿಎಫ್‌ಒ ಜತೆ ಚರ್ಚಿಸಿದರು. ಆವತಿ ಹೋಬಳಿ ಹೊಸಳ್ಳಿ ಗ್ರಾಮದ ಸರ್ವೇ ನಂಬರ್11ರಲ್ಲಿ 97 ಎಕರೆ ಜಾಗದಲ್ಲಿ ಹೊಸಳ್ಳಿ ಗ್ರಾಮದ ಗಂಗಮ್ಮ ಎಂಬುವರು 1984ರಿಂದ ಕೃಷಿ ಮಾಡುತ್ತಿದ್ದಾರೆ. ಈ ಜಾಗಕ್ಕೆ ಫಾರ್ಮ್ ನಂಬರ್ 53, 57ರಲ್ಲಿ ಅರ್ಜಿ ಹಾಕಿ ದಾಖಲೆಗಳನ್ನು ಮಾಡಿಸಿಕೊಳ್ಳಲು ಅಂದಿನಿಂದ ಹೋರಾಟ ಮಾಡುತ್ತಿದ್ದಾರೆ. ಕಳೆದ ತಿಂಗಳು ಈ ಜಾಗದಲ್ಲಿ ಹಾಕಿದ ಕಾಫಿ ಗಿಡಗಳನ್ನು ಅರಣ್ಯ ಇಲಾಖೆ ಮಾಹಿತಿ ನೀಡದೇ ಕಿತ್ತುಹಾಕಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಕುಮಾರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಲಕ್ಷ್ಮಣ್ ಹುಣಸೇಮಕ್ಕಿ, ವಿಜಯ್, ರವಿ, ಪ್ರಕಾಶ್, ಗಣೇಶ್ ಕಠಾರದಹಳ್ಳಿ , ರಂಜಿತಾ,ಗಂಗಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net