ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಆಕ್ರೋಶ

22jyp1
Published on

ಜಯಪುರ: ಲೋಕೋಪಯೋಗಿ ಇಲಾಖೆಯ ಅವೈಜ್ಞಾನಿಕ ಕಾರ್ಯನಿರ್ವಹಣೆ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರ ನಿರ್ಲಕ್ಷದಿಂದ ಕಳೆದ ಒಂದು ವಾರದಿಂದ ಬಸರೀಕಟ್ಟೆ -ಕೊಗ್ರೆ ಮುಖ್ಯರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಬಸರೀಕಟ್ಟೆಯ ಕಳಸ ವೃತ್ತದ ಸಮೀಪ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಮುಖಂಡ ಮಣಿಕಂಠನ್ ಕಂದಸ್ವಾಮಿ ಮಾತನಾಡಿ, ರಸ್ತೆಯ ಚರಂಡಿ ದುರಸ್ತಿ ಮಾಡಿದ ಮಣ್ಣನ್ನು ರಸ್ತೆ ಬದಿ ಹಾಕಿರುವುದರಿಂದ ವಾಹನ ಸಂಚಾರ ಸಾಧ್ಯವಾಗದೆ ದಿನ ನಿತ್ಯದ ಬಸ್‌ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಕಲ್ಲುಗುಡ್ಡೆ, ಮೆಣಸಿನಹಾಡ್ಯ, ಬಿಳಾಲುಕೊಪ್ಪ , ಕೊಗ್ರೆ, ಗುಡ್ಡೆತೋಟ ಭಾಗದ ಶಾಲಾ ಮಕ್ಕಳಿಗೆ, ಅನಾರೋಗ್ಯ ಪೀಡಿತರಿಗೆ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಈ ರೀತಿ ಮಣ್ಣು ಹಾಕಿ ರಸ್ತೆಯನ್ನು ಕೆಸರು ಮಾಡಿ ಕಾಮಗಾರಿ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಕೂಡಲೇ ರಸ್ತೆ ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು .

ಮುಖಂಡರಾದ ಧರ್ಮರಾಜ್, ಅರುಣ್‌ಕುಮಾರ, ನಟರಾಜ್, ಮುರಳಿ, ಪ್ರಕಾಶ್, ಚಂದ್ರಶೇಖರ್, ಸಮರ್ಥ, ಸುಜಯ್, ಮೋಹನ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net