ಸಾರಿಗೆ ಬಸ್ ತಡೆದು ಆಕ್ರೋಶ

ಕನಕಗಿರಿ ತಾಲೂಕಿನ ಸುಳಕಲ್ ಗ್ರಾಮದಲ್ಲಿ ಬಸ್ ನಿರ್ವಾಹಕ ವಿದ್ಯಾರ್ಥಿನಿಯರಿಗೆ ಹಲ್ಲೆ ಮಾಡಿದ್ದಾನೆ ಎಂದು ಬಸ್ ತಡೆದು ವಿದ್ಯಾರ್ಥಿಗಳು, ಯುವಕರು ಪ್ರತಿಭಟನೆ ನಡೆಸಿದರು.
ಕನಕಗಿರಿ ತಾಲೂಕಿನ ಸುಳಕಲ್ ಗ್ರಾಮದಲ್ಲಿ ಬಸ್ ನಿರ್ವಾಹಕ ವಿದ್ಯಾರ್ಥಿನಿಯರಿಗೆ ಹಲ್ಲೆ ಮಾಡಿದ್ದಾನೆ ಎಂದು ಬಸ್ ತಡೆದು ವಿದ್ಯಾರ್ಥಿಗಳು, ಯುವಕರು ಪ್ರತಿಭಟನೆ ನಡೆಸಿದರು.
Published on

ಕನಕಗಿರಿ: ಸಾರಿಗೆ ಬಸ್ ನಿರ್ವಾಹಕ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ತಾಲೂಕಿನ ಸುಳೇಕಲ್ ಗ್ರಾಮದ ವಿದ್ಯಾರ್ಥಿಗಳು, ಯುವಕರು ಗುರುವಾರ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸುಳೇಕಲ್ ಗ್ರಾಮದ ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಗಂಗಾವತಿ ತಾಲೂಕಿನ ಕೇಸರಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ತೆರಳುತ್ತಾರೆ. ಕೇಸರಹಟ್ಟಿಯಿಂದ ಸುಳೆಕಲ್ಗೆ ಬರುವಾಗ ಗಂಗಾವತಿ ಡಿಪೋ ಬಸ್ ನಿರ್ವಾಹಕ ಪರಶುರಾಮ ವಿದ್ಯಾರ್ಥಿಗಳು ಬಸ್‌ಗೆ ಹತ್ತುವಾಗ ಹೊಡೆದಿದ್ದಾರೆ ಎಂದು ಬಸ್ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಎಎಸ್‌ಐ ನಿಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ನಿರ್ವಾಹಕನ ಜತೆ ಚರ್ಚಿಸಿ ಮುಂದೆ ಈ ರೀತಿಯಾಗದಂತೆ ಎಚ್ಚರಿಕೆವಹಿಸಿ ಎಂದು ತಿಳಿಹೇಳಿದ ಬಳಿಕ ಬಸ್ ಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net