ನೀಟ್ ವೇಳೆ ಜನಿವಾರ ತೆಗೆಸಿದ್ದಕ್ಕೆ ಆಕ್ರೋಶ

ಬಳಗಾನೂರಿನಲ್ಲಿ ಉಪತಹಸೀಲ್ದಾರ್ ನಾಗಲಿಂಗ ಪತ್ತಾರಗೆ ಹಿಂದು ಮುಖಂಡರು ಮನವಿ ಸಲ್ಲಿಸಿದರು. ಪ್ರಮುಖರಾದ ಡಾ.ಶರಭಯ್ಯಸ್ವಾಮಿ ಗಣಾಚಾರಿಮಠ, ರಂಗನಾಥ ಪೂಜಾರ, ಭೀಮಣ್ಣ ವಿಶ್ವಕರ್ಮ, ಮಲ್ಲರಾವ್ ಪಟವಾರಿ, ರಾಘವೇಂದ್ರ ಕುಲಕರ್ಣಿ ಇತರರಿದ್ದರು.
ಬಳಗಾನೂರಿನಲ್ಲಿ ಉಪತಹಸೀಲ್ದಾರ್ ನಾಗಲಿಂಗ ಪತ್ತಾರಗೆ ಹಿಂದು ಮುಖಂಡರು ಮನವಿ ಸಲ್ಲಿಸಿದರು. ಪ್ರಮುಖರಾದ ಡಾ.ಶರಭಯ್ಯಸ್ವಾಮಿ ಗಣಾಚಾರಿಮಠ, ರಂಗನಾಥ ಪೂಜಾರ, ಭೀಮಣ್ಣ ವಿಶ್ವಕರ್ಮ, ಮಲ್ಲರಾವ್ ಪಟವಾರಿ, ರಾಘವೇಂದ್ರ ಕುಲಕರ್ಣಿ ಇತರರಿದ್ದರು.
Published on

ಮಸ್ಕಿ: ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಖಂಡಿಸಿ ತಾಲೂಕಿನ ಬಳಗಾನೂರಿನಲ್ಲಿ ಹಿಂದು ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.

ಈಗ ಜನಿವಾರ ತೆಗೆಸಿದ್ದಾರೆ, ಮುಂದೆ ಶಿವದಾರ ತೆಗೆಸಲು ಹಿಂಜರಿಯುವುದಿಲ್ಲ. ಆದ್ದರಿಂದ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಂಥ ಘಟನೆಗಳು ಮರುಕಳಿಸದಂತೆ ಎಲ್ಲರೂ ಒಗ್ಗಟ್ಟಿನಿಂದ ಪ್ರತಿಭಟಿಸಬೇಕಾದ ಅಗತ್ಯವಿದೆ ಎಂದರು. ಮೇಗಳಪೇಟೆ ಚೌಡೇಶ್ವರಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಾಡಕಾರ್ಯಲಯಕ್ಕೆ ತೆರಳಿ ಉಪ ತಹಸೀಲ್ದಾರ್ ನಾಗಲಿಂಗ ಪತ್ತಾರಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಡಾ.ಶರಭಯ್ಯಸ್ವಾಮಿ ಗಣಾಚಾರಿಮಠ, ರಂಗನಾಥ ಪೂಜಾರ, ಭೀಮಣ್ಣ ವಿಶ್ವಕರ್ಮ, ಮಲ್ಲರಾವ್ ಪಟವಾರಿ, ರಾಘವೇಂದ್ರ ಕುಲಕರ್ಣಿ, ಮಧು ಪಟವಾರಿ ಶ್ರೀಧರ ರೇವಣಕರ್, ಬಸವರಾಜ ಕರಡಕಲ್, ಪ್ರಭು ಕಮ್ಮಾರ, ನಟರಾಜ ಕೊಂಡ, ಮೌನೇಶ ಲೋಕ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net