

ಹೊಳಲ್ಕೆರೆ: ಸರ್ಕಾರ ಬೇಡಿಕೆ ಈಡೇರಿಸುವಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಕಚೇರಿ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತೆಯರು, ಕೂಡಲೇ ವೇತನ ಹೆಚ್ಚಳ ಸೇರಿ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಬೀಬಿ ಪಾತಿಮಾ ಅವರಿಗೆ ಮನವಿ ಸಲ್ಲಿಸಿದರು.
ಫೆಡರೇಷನ್ ಕಾರ್ಯದರ್ಶಿ ಗಂಗಮ್ಮ, ಸಹ ಕಾರ್ಯದರ್ಶಿ ಸಾಜಿದಾ ಇತರರಿದ್ದರು.