ಪ್ರೊ.ಭಗವಾನ್ ವಿರುದ್ಧ ಆಕ್ರೋಶ

ಫೋಟೋ ಶೀರ್ಷಿಕೆ 18 ಸಿಆರ್_ಪಿ-1ಎ.
Published on

ಚನ್ನರಾಯಪಟ್ಟಣ: ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಪ್ರೊ.ಭಗವಾನ್ ಹೇಳಿಕೆ ಖಂಡಿಸಿ ಪಟ್ಟಣದಲ್ಲಿಬುಧವಾರ ನಾನಾ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಮೈಸೂರಿನಲ್ಲಿ ನಡೆದ ಮಹಿಷ ದಸಾರ ವೇಳೆ ಭಗವಾನ್ ಎಂಬಾತ ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ವಿವದಾತ್ಮಕ ಹೇಳಿಕೆ ನೀಡುವ ಮೂಲಕ ಕುವೆಂಪು ಮತ್ತು ಒಕ್ಕಲಿಗರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಹಾಗಾಗಿ ಇವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಬಿ.ಎಂ.ಗೋವಿಂದ್‌ರಾಜ್‌ಗೆ ಮನವಿ ಸಲ್ಲಿಸಿದರು.

ಪಟ್ಟಣದ ಕೆ.ಆರ್.ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಬಿ.ಎಂ.ರಸ್ತೆಯಲ್ಲಿ ಸಾಗಿ ನವೋದಯ ವೃತ್ತದಲ್ಲಿ ಜಮಾವಣೆಗೊಂಡಿತು. ಬಳಿಕ ಭಗವಾನ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್ ಮಾತನಾಡಿ, ಭಗವಾನ್ ಹೇಳಿಕೆ ಶಾಂತಿಯತೆಯನ್ನು ಕದಡುವ ಂತಿದೆ. ಅನ್ನ ಹಾಕುವ ಒಕ್ಕಲಿಗ ಸಮುದಾಯವನ್ನು ತೇಜೋವಧೆ ಮಾಡಿರುವ ಇಂತಹವರ ವಿರುದ್ಧ ಪೊಲೀಸ್ ಸುಮೊಟೋ ದೂರು ದಾಖಲಿಸಬೇಕಿತ್ತು. ಆದರೆ ಸರ್ಕಾರ ಇವರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಶೀಘ್ರ ಈತನನ್ನು ರಾಜ್ಯದಿಂದ ಗಡಿಪಾರು ಮಾಡುಬೇಕೆಂದು ಆಗ್ರಹಿಸಿದರು.

ನಾಡಪ್ರಭು ಕೆಂಪೇಗೌಡ ವೇದಿಕೆ ಅಧ್ಯಕ್ಷ ಆನಂದ್‌ಕಾಳೇನಹಳ್ಳಿ, ಮುಖಂಡ ಎ.ಸಿ.ಆನಂದ್‌ಕುಮರ್ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಸಿ.ಎನ್.ಅಶೋಕ್, ಅರಳಾಪುರದ ಮಂಜೇಗೌಡ, ಭರತ್‌ಗೌಡ, ಅಪ್ಪಿಕರವೇ, ಸಿ.ಜಿ.ರವಿ, ಮೀಸೆ ಮಂಜಣ್ಣ, ತರಕಾರಿ ಕೃಷ್ಣ, ಶಿವೇಗೌಡ, ಜಯಪಾಲ್, ಸಿ.ಎನ್.ನಾಗರಾಜು, ಪುಟ್ಟಸ್ವಾಮಿಗೌಡ, ನಾಗರತ್ನ, ಬೀಡಾ ಮಂಜು, ಸಿ.ಜಿ.ಗಂಗಾಧರ್, ಶ್ರೀಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net