ಅಮ್ಯೂಸ್‌ಮೆಂಟ್ ಪಾರ್ಕ್ ಗಿಲೀಟಿನ ಯೋಜನೆ: ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಟೀಕೆ

Sunanda Jayaramu Mandya
Published on

ಮಂಡ್ಯ: ಕೆಆರ್‌ಎಸ್ ಡ್ಯಾಂ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡುವ ರಾಜ್ಯಸರ್ಕಾರ ಯೋಜನೆ ಜಿಲ್ಲೆಗೆ ಮಾರಕವಾಗುವ ಹಾಗೂ ದಿವಾಳಿ ಮಾಡಲಿವೆ ಎಂದು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಟೀಕಿಸಿದ್ದಾರೆ.

ಕಾವೇರಿ ಆರತಿ, ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಬೆಂಗಳೂರಿಗೆ ನೀರು ಕೊಡುವ ಯೋಜನೆ ಭವಿಷ್ಯದಲ್ಲಿ ಮಂಡ್ಯ ಜಿಲ್ಲೆಯನ್ನು ಬರಡು ಮಾಡುವ ಹಾಗೂ ಜನರಿಗೆ ಮಣ್ಣು ಮುಕ್ಕಿಸುವ ಹುನ್ನಾರವಾಗಿದೆ. ಯೋಜನೆಯಿಂದಾಗಿ ಹಲವು ತೊಂದರೆ ಎದುರಾಗಲಿದೆ. ಮುಖ್ಯವಾಗಿ ಈ ಕಾರ್ಯಕ್ರಮ ವಿರೋಧಿಸಿ ಸ್ಥಳೀಯ ಗ್ರಾಮ ಪಂಚಾಯಿತಿಗಳು ನಿರ್ಣಯ ತೆಗೆದುಕೊಂಡಿವೆ. ರಾಜ್ಯಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆಯಲಾಗಿದೆ. ಆದರೆ ಡಿಸಿಎಂ ಡಿಕೆಶಿ ಅವರು ಯೋಜನೆ ಕುರಿತು ರೈತರೊಂದಿಗೆ ಮಾತನಾಡುತ್ತೇವೆ. ಯಾರಿಗೂ ತೊಂದರೆಯಾಗುವುದಿಲ್ಲ. ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆಂದು ಮಾತನಾಡಿ ಜಿಲ್ಲೆಯ ಜನರಿಗೆ ಹೂವು ಮುಡಿಸುವ ಕೆಲಸ ಮಾಡಿದ್ದಾರೆ. ಆದ್ದರಿಂದ ಜಿಲ್ಲೆಯ ಜನರಿಗೆ ದ್ರೋಹ ಮಾಡುವಂತಹ ಇಂತಹ ಯೋಜನೆಯನ್ನು ಕೂಡಲೇ ಹಿಂಪಡೆಯಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net