

ಮೈಸೂರು: ನಗರದ ವಿವಿಧ ಬಡಾವಣೆಯಲ್ಲಿ ಜೆಎಸ್‌ಎಸ್ ಧಾರ್ಮಿಕ ದತ್ತಿಯಿಂದ ಕೊನೆ ಶನಿವಾರ ಆಯೋಜಿಸುವ ಶಿವಾನುಭವ ದಾಸೋಹ ಕುರಿತು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ರೂಪುರೇಷೆ ಸಿದ್ಧಪಡಿಸಲಾಯಿತು.
ಸುತ್ತೂರು ಮಠದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಿವಾನುಭವ ದಾಸೋಹದಲ್ಲಿ ನಡೆಯುವ ಪ್ರವಚನ, ಭಜನೆ ಹಾಗೂ ದಾಸೋಹ ಕಾರ್ಯಕ್ರಮವನ್ನು 25ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಪ್ರತಿ ತಿಂಗಳು ಏರ್ಪಡಿಸುವ ಸಂಬಂಧ ಚರ್ಚಿಸಲಾಯಿತು.
ದತ್ತಿಯ ಅಧ್ಯಕ್ಷ ಎಸ್.ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಲೋಹಿತ್ ದೊರೆಸ್ವಾಮಿ, ಉಪಾಧ್ಯಕ್ಷ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಜಯಶಂಕರ್, ನಿರ್ದೇಶಕರಾದ ಮಾದಪ್ಪ, ಶ್ರೀಶೈಲ ಕುಂಬಾರ, ನಂದೀಶ್, ಗಜೇಂದ್ರ, ಚೇತನ್ ಇತರರಿದ್ದರು.