ಔಟರ್​ ರಿಂಗ್​ ರಸ್ತೆ ವಿರುದ್ಧದ ಹೋರಾಟಕ್ಕೆ ಜೆಡಿಎಸ್​ ಬೆಂಬಲ

10Tmk_Outer_Ring_Road
Published on

ತುಮಕೂರು: ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಔಟರ್​ ರಿಂಗ್​ ರಸ್ತೆಗೆ ರೈತರ ಫಲವತ್ತಾದ ಜಮೀನಿನ ಭೂಸ್ವಾಧಿನ ವಿರೋಧಿಸಿ ಅ.13 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ರೈತರು ಹಮ್ಮಿಕೊಂಡಿರುವ ಹೋರಾಟಕ್ಕೆ ಜೆಡಿಎಸ್​ ಬೆಂಬಲ ವ್ಯಕ್ತಪಡಿಸಿದೆ.

ಈಗಾಗಲೇ ಕ್ಯಾತ್ಸಂದ್ರ ಗುಬ್ಬಿ ಗೇಟ್​ ಬೈಪಾಸ್​ ರಸ್ತೆ, ಚನ್ನೆ$&ಮುಂಬೈ ಕೈಗಾರಿಕಾ ಕಾರಿಡಾರ್​ ಯೋಜನೆಗಳು ಚಾಲ್ತಿಯಲ್ಲಿದಾಗ್ಯೂ,ಕೆಲವರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ನಂದಿಹಳ್ಳಿಯಿಂದ ಆರಂಭಗೊಂಡು ಮಲ್ಲಸಂದ್ರ ಮತ್ತು ವಸಂತನರಸಾಪುರ ಕೈಗಾರಿಕಾ ಪ್ರದೇಶದವರಗೆ ಔಟರ್​ ರಿಂಗ್​ ರಸ್ತೆ ಮಾಡಲು ಮುಂದಾಗಿದೆ.ಇದರಿಂದ ಸುಮಾರು 46 ಹಳ್ಳಿಗಳ 650 ಎಕರೆಗೂ ಹೆಚ್ಚು ಪ್ರದೇಶ ಭೂಸ್ವಾಧಿನವಾಗಲಿದೆ. ಭೂಮಿ ಕಳೆದುಕೊಳ್ಳುವ ಸಂತ್ರಸ್ತರು ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಿ ನೈತಿಕ ಸ್ಥೆ$ರ್ಯ ತುಂಬಲಾಗುವುದು ಎಂದು ಜೆಡಿಎಸ್​ ಮಾಜಿ ಶಾಸಕ ಎಚ್​.ನಿಂಗಪ್ಪ ಹೇಳಿದ್ದಾರೆ.

ಈ ಪ್ರದೇಶದಲ್ಲಿ ರೈತರು ತೋಟ,ತುಡಿಕೆ ಮಾಡಿರುವುದಲ್ಲದೆ, ಹೆಚ್ಚಿನ ರೀತಿಯಲ್ಲಿ ಕೊಳವೆ ಬಾವಿ ನೀರು ಆಶ್ರಯಿಸಿ ತರಕಾರಿ, ಹಣ್ಣ, ಹೂವುಗಳನ್ನು ಬೆಳೆದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಭೂಸ್ವಾಧಿನ ವಿರೋಧಿಸಿ ಸಂತ್ರಸ್ತ ರೈತರು ಅ.13 ರಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ರೈತರ ಜತೆಗೆ, ಒರ್ವ ರೈತನ ಮಗನಾಗಿ ಈ ಹೋರಾಟದಲ್ಲಿ ನಾನು ಪಾಲ್ಗೊಳ್ಳುತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಕೈಗಾರಿಕೆ,ರಸ್ತೆ, ವಿಮಾನ ನಿಲ್ದಾಣದ ಹೆಸರಿನಲ್ಲಿ ತುಮಕೂರು ನಗರದ ಸುತ್ತಮುತ್ತಲ ಪ್ರದೇಶದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಅಲ್ಪಸ್ವಲ್ಪ ಭೂಮಿಯಲ್ಲಿಯೇ ತಮಗೆ ತೋಚಿದ್ದನ್ನು ಬೆಳೆದು ರೈತರು ಬದುಕು ಕಂಡುಕೊಂಡಿದ್ದಾರೆ. ಇಂತಹ ವೇಳೆಯಲ್ಲಿ ಔಟರ್​ ರಿಂಗ್​ ರಸ್ತೆ ಹೆಸರಿನಲ್ಲಿ ಭೂ ಮಾಫಿಯಗಳಿಗೆ ಅನುಕೂಲ ಮಾಡಿಕೊಡಲು ನೂರಾರು ಎಕರೆ ಭೂಮಿಯನ್ನು ರೈತರ ಅನುಮತಿ ಇಲ್ಲದೆ ಸ್ವಾಧಿನ ಪಡಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆಯಿದೆ.ಆದರೆ, ಅತಿ ಕಡಿಮೆ ದರಕ್ಕೆ ರೈತರ ಭೂಮಿಯನ್ನು ಕಸಿಯುವ ಹುನ್ನಾರವನ್ನು ಸರ್ಕಾರ ಮಾಡಲು ಹೊರಟಿದೆ. ಇದನ್ನು ನಾನು ಖಂಡಿಸುತ್ತೇನೆ.ಒಮ್ಮೆ ಔಟರ್​ ರಿಂಗ್​ ರಸ್ತೆ ನಿಮಾರ್ಣವಾದರೆ ಅದರ ಒಳಗೆ ಬರುವ ಎಲ್ಲಾ ಪ್ರದೇಶಗಳು ವಿವಿಧ ಹೆಸರಿನಲ್ಲಿ ಭೂ ಸ್ವಾಧಿನಗೊಂಡು, ಜನರು ಬೀದಿಗೆ ಬೀಳಬೇಕಾಗುತ್ತದೆ. ಹಾಗಾಗಿ, ಹೋರಾಟದಲ್ಲಿ ಭಾಗಿಯಾಗಿ ನೈತಿಕ ಸ್ಥೆ$ರ್ಯ ತುಂಬಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net