ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ‘‘ಧರ್ಮಸಂಕಟ’’, ರಾಜ್ಯಪಾಲರ ನಡೆಗೆ ಮಂಗಳೂರಿನಲ್ಲಿ ಜನಾಕ್ರೋಷ

mangalore VV
ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಉಪ ಕುಲಪತಿ ಡಾ.ಪಿ.ಎಲ್ ಧರ್ಮ ವೇದಿಕೆಯಲ್ಲೇ ದು:ಖದಿಂದ ಕಣ್ಣೀರು ಹಾಕುವಂತ ಸ್ಥಿತಿ ನಿರ್ಮಾಣವಾಗಿತ್ತು.
Published on

ಮಂಗಳೂರು: ‘ಹೇ.... ನೀನ್ಯಾಕೆ ತಲೆಬಗ್ಗಿ ಕೂತಿದ್ಯಾ, ತಲೆಯೆತ್ತು ಮುಂದೆ ನೋಡು....’ ಈ ರೀತಿ ಘಟಿಕೋತ್ಸವದ ವೇದಿಕೆಯಲ್ಲಿ ರಾಜ್ಯಪಾಲರೊಬ್ಬ ಮಾತು ಆಡಿದರೆ ಪ್ರತಿಷ್ಠಿತ ವಿವಿಯೊಂದರ ಉಪ ಕುಲಪತಿಯೊಬ್ಬರಿಗೆ ‘ಧರ್ಮಸಂಕಟ’ದ ಸ್ಥಿತಿ...!

ಸುಜಜ್ಜಿತ ಮಂಗಳ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 12 ಗಂಟೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 42ನೆ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಡೀ ಕಾರ್ಯಕ್ರಮದಲ್ಲಿ ಅವರದ್ದೇ ರಾಜ್ಯದರ್ಭಾರಿನಂತಿತ್ತು. ಇಡೀ ಕಾರ್ಯಕ್ರಮದ ಶಿಷ್ಠಾಚಾರವನ್ನೇ ಬದಲಿಸಿದ ರಾಜ್ಯಪಾಲರ ನಡೆಯಿಂದ ಇಂದು ಹಂತದಲ್ಲಿ ಉಪ ಕುಲಪತಿ ಡಾ.ಪಿ.ಎಲ್ ಧರ್ಮ ವೇದಿಕೆಯಲ್ಲೇ ದು:ಖದಿಂದ ಕಣ್ಣೀರು ಹಾಕುವಂತ ಸ್ಥಿತಿ ನಿರ್ಮಾಣವಾಗಿತ್ತು.

ಶಿಷ್ಠಾಚಾರವನ್ನೇ ಮಿರಿದ್ರಾ ರಾಜ್ಯಪಾಲರು?

ಘಟಿಕೋತ್ಸವ ಪೂರ್ವಶಿಷ್ಠಾಚಾರದಂತೆ ನಡೆಸಲು ಮಂಗಳೂರು ವಿವಿ ಎಲ್ಲಾಧಿಕಾರಿಗಳು ಪೂರ್ವಸಿದ್ದತೆ ನಡೆಸಿದ್ದರು. ಆದರೆ ರಾಜ್ಯಪಾಲರು ವೇದಿಕೆಯಲ್ಲೇ ಕೂತು ಏರುಧ್ವನಿಯಲ್ಲೇ ತಮಗೆ ಬೇಕಾದ ರೀತಿಯಲ್ಲಿ ಕಾರ್ಯಕ್ರಮದ ಶಿಷ್ಠಾಚಾರವನ್ನು ಬದಲು ಮಾಡಲು ನಿರ್ದೇಶಿಸುತ್ತಿದ್ದರು. ಘಟಿಕೋತ್ಸವದ ಕೊನೇಯಲ್ಲಿ ಹಾಡಬೇಕಿದ್ದ ರಾಷ್ಟ್ರಗೀತೆಯನ್ನು ಆರಂಭದಲ್ಲೇ ಹಾಡಲು ಸೂಚಿಸಿದರು. ಒಂದುವರೆ ಗಂಟೆಯ ಇಡೀ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ವಿವಿಯ ಉಪ ಕುಲಪತಿ, ಪರೀಕ್ಷಾಂಗ ಕುಲಸಚಿವರಿಗೆ ಬಾಯಿಗೆ ಬಂದಂತೆ ಮೌಕಿಕ ನಿರ್ದೇಶನ ನೀಡುತ್ತಿದ್ದರು. ಪಿ.ಎಚ್.ಡಿ. ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲರ ಕೈಯಿಂದಲೇ ನೀಡುವುದು ಶಿಷ್ಠಾಚಾರ, ಆದರೆ ಈಬಾರಿ ಸಂಶೋಧನಾರ್ಥಿಗಳಿಗೆ ಪಿ.ಎಚ್.ಡಿ. ಡಾಕ್ಟರೇಟ್ ಸರ್ಟಿಫಿಕೇಟ್‌ನ್ನು ಕಾರ್ಯಕ್ರಮದ ಮೊದಲೇ ಹಂಚಿ ನಂತರ ಎಲ್ಲರನ್ನೂ ಒಟ್ಟಿಗೆ ವೇದಿಕೆಗೆ ಕರೆದು ರಾಜ್ಯಪಾಲರು ಗ್ರೂಪ್ ಪೊಟೊಗೆ ಫೋಸ್ ನೀಡಿದ್ದಾರೆ. ಈಮಧ್ಯೆ ರಾಜ್ಯಪಾಲರ ಅಂಗರಕ್ಷಕರಾಗಿದ್ದ ಬೆಂಗಳೂರಿನ ಹೆಡ್‌ಕಾಸ್ಟೇಬಲ್ ವೇದಿಕೆಯಲ್ಲಿ ನಿಂತು ಏರುದನಿತಲ್ಲೇ ವಿವಿ ಸಿಬ್ಬಂದಿಗಳತ್ತ ಮಾತು, ಮಾಧ್ಯಮದ ಕ್ಯಾಮರಾಮೆನ್‌ಒಬ್ಬರನ್ನು ದೂಡಿದ ಘಟನೆಯೂ ನಡೆಯಿತು.

ಧರ್ಮ ಸಂಕಟದಲ್ಲಿ ಕಣ್ಣೀರು

ಇಡೀ ಘಟನೆ ಬಗ್ಗೆ ವಿವಿ ಅಧಿಕಾರಿಗಳು ಮೌನವಾಗಿ ಪ್ರತಿಕ್ರೀಯಿಸುತ್ತಿದ್ದರೆ, ಉಪ ಕುಲಪತಿ ಡಾ.ಪಿ.ಎಲ್ ಧರ್ಮ ವೇದಿಕೆಯಲ್ಲೇ ದು:ಖದಿಂದ ಕಣ್ಣೀರು ಹಾಕುವಂತ ಸ್ಥಿತಿ ನಿರ್ಮಾಣವಾಗಿತ್ತು. ಇಡೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲರು ಸಭೆಯುದ್ದಕ್ಕೂ ಒಂದು ನಿಮಿಷವೂ ಮಾತನಾಡದೆ ಸುಮ್ಮನೆ ಕುಳಿತಿರದ ಬಗ್ಗೆ ಸಭಾಂಗಣದಲ್ಲಿದ್ದ ಹಲವರು ಆಕ್ರೋಷ ವ್ಯಕ್ತಪಡಿಸಿದ್ದರು. ಭಾಗವಹಿಸಿದ್ದ ಕಾಂಗ್ರೆಸ್, ಬಿಜೆಪಿ ಮುಖಂಡರೆಲ್ಲ ವಿವಿ ವಿದ್ಯಾರ್ಥಿಗಳು ರಾಜ್ಯಪಾಲರ ವಿರುದ್ದ ಆಕ್ರೋಷ ವ್ಯಕ್ತಪಡಿಸಿರುವುದು ಕಂಡುಬಂತು. ಈ ಘಟನೆ ಬಗ್ಗೆ ವಿವಿಯ ಯಾವುದೇ ಅಧಿಕಾರಿಗಳು ಮಾಧ್ಯಮಕ್ಕೆ ಪ್ರತಿಕ್ರೀಯೆ ನೀಡಲು ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net