

ಬೆಂಗಳೂರು: ಜನತಾಕರ್ಪ್ಯೂಗೆ ಭಾನುವಾರ ಸಂಪೂರ್ಣ ಬೆಂಬಲ ಕಂಡುಬಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಜನದಟ್ಟಣೆ ಕಂಡುಬಂತು. ಭಾನುವಾರ ಸಂಪೂರ್ಣ ಸ್ತಬ್ಧವಾಗಿದ್ದ ಜಿಲ್ಲೆಯ ಚಿತ್ರಣ ಮಾರನೇ ದಿನ ಸಂಪೂರ್ಣ ಬದಲಾಗಿತ್ತು.
ಮನೆಯಿಂದ ಹೊರಬಂದ ಜನರು ದಿನನಿತ್ಯದ ಕೆಲಸಕ್ಕೆ ಮುಂದಾಗಿದ್ದು ಕಂಡುಬಂತು. ವಾಣಿಜ್ಯ ಮಳಿಗೆಗಳು ಪ್ರತಿದಿನಕ್ಕಿಂತ 1 ತಾಸು ಮೊದಲೆ ಬಾಗಿಲು ತೆಗೆದು ಗ್ರಾಹಕರ ಬರುವಿಕೆಗೆ ಕಾದು ಕುಳಿತ ದೃಶ್ಯ ಕಂಡುಬಂತು. ಮಾ.23ರಿಂದ 31ರವರೆಗೆ ಜಿಲ್ಲೆಯಲ್ಲಿ ಲಾಕ್‌ಡೌನ್ ೋಷಣೆಯಾಗಿದ್ದರೂ ಜನಜೀವನ ಎಂದಿನಂತೆ ಇತ್ತು. ಮಧ್ಯಾಹ್ನದ ವೇಳೆ ಪೊಲೀಸರೊಂದಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾದರು.
ಯುಗಾದಿ ಎೆಕ್ಟ್: ಬುಧವಾರ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಕೊರತೆಯಾಗಬಹುದೆಂಬ ಆತಂಕದಲ್ಲಿ ಸಾರ್ವಜನಿಕರು ಮಳಿಗೆಗಳಲ್ಲಿ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಊರುಗಳಿಗೆ ತೆರಳಲು ತಂಡೋಪತಂಡವಾಗಿ ಜನರು ಆಗಮಿಸಿದ್ದರಿಂದ ಬಸ್‌ನಿಲ್ದಾಣಗಳು, ಪ್ರಮುಖ ವೃತ್ತಗಳಲ್ಲಿ ಜನದಟ್ಟಣೆ ಕಂಡುಬಂತು. ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಟೊಲ್‌ಗಳಲ್ಲಿ ವಾಹನದಟ್ಟಣೆ ನಿರ್ಮಾಣವಾಗಿತ್ತು. ಚೆಕ್‌ಪೋಸ್ಟ್‌ಗಳಲ್ಲೂ ವಾಹನದಟ್ಟಣೆ ಹೆಚ್ಚಾದ್ದರಿಂದ ಪ್ರಯಾಣಿಕರ ತಪಾಸಣೆಗೆ ವೈದ್ಯರ ತಂಡ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮಾ.31ರವರೆಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜು, ಖಾಸಗಿ ಕಂಪನಿಗಳು, ಅನೇಕ ಕಾರ್ಖಾನೆಗಳು ರಜೆ ೋಷಿಸಿದ್ದರಿಂದ ಎಲ್ಲ ನೌಕರರು ಕುಟುಂಬದವರೊಂದಿಗೆ ಊರುಗಳಿಗೆ ತೆರಳಲು ಸಜ್ಜಾಗಿದ್ದರಿಂದ ಸೋಮವಾರ ಹೆಚ್ಚು ಜನದಟ್ಟಣೆ ಕಂಡುಬಂತು.