ಮೈಸೂರು: ಆ್ಯಡ್ 6 ಎಂಟರ್‌ಟೈನ್‌ಮೆಂಟ್ ಸಂಸ್ಥೆ ನಿರ್ಮಿಸಿ ಪ್ರದೀಪ್ ದೊಡ್ಡಯ್ಯ ನಿರ್ದೇಶಿಸಿ ನಟಿಸಿರುವ ‘ಔಟ್ ಆಫ್ ಸಿಲಬಸ್’ ಸಿನಿಮಾ ಡಿ.27ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ನಾನು ಮೊದಲ ಬಾರಿಗೆ ಅಭಿನಯಿಸಿ, ಕತೆ, ಚಿತ್ರಕತೆ, ಸಾಹಸ ನಿರ್ದೇಶನವನ್ನೂ ಮಾಡಿದ್ದೇನೆ. ಹೃತಿಕಾ ಶ್ರೀನಿವಾಸ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಯುವ ಜನರಿಗೆ ಉತ್ತಮ ಮನರಂಜನೆ ನೀಡುವುದಲ್ಲದೆ ಕುಟುಂಬ ಸಮೇತ ಎಲ್ಲರೂ ನೋಡುವಂತಹ ಸಿನಿಮಾ ನಿರ್ಮಿಸಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯ ನಟರಾದ ಯೋಗರಾಜ್ ಭಟ್, ಅಚ್ಯುತ್ ಕುಮಾರ್, ರಾಮಕೃಷ್ಣ, ಚಿಕ್ಕಲಾ ಬಿರಾದಾರ್ ಇತರರು ಅಭಿನಯಿಸಿದ್ದಾರೆ. 5 ಹಾಡುಗಳಿದ್ದು, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುದ್ದೇವೆ. ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿವೆ. ಪುಷ್ಪ-2 ಸಿನಿಮಾ ಹಂಚಿಕೆದಾರರಾದ ಗೋಕುಲ್ ಫಿಲಂಸ್ ನಮ್ಮ ಚಿತ್ರದ ಹಂಚಿಕೆಗೆ ಮುಂದಾಗಿದ್ದಾರೆ ಎಂದರು.
ನಟಿಯರಾದ ಪ್ರಕೃತಿ, ಐಶ್ವರ್ಯ ರೇಚಲ್, ಸಹ ನಿರ್ದೇಶಕ ಚೇತನ್ ಇದ್ದರು.