ಉದಾತ್ತ ಚಿಂತನೆ ಹೊಂದಿರುವ ಧರ್ಮ ನಮ್ಮದು

Ours is a religion with noble thoughts.
ಗುಳೇದಗುಡ್ಡದ ಶ್ರೀಗುರುಸಿದ್ದೇಶ್ವರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು. ಹುಬ್ಬಳ್ಳಿ ಮೂರುಸಾವಿರ ಮಠದ ಡಾ.ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು, ಕಾಶೀನಾಥ ಶ್ರೀಗಳು, ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳು, ಆಳಂದದ ಶ್ರೀ ರೇವಣಸಿದ್ಧ ಪಟ್ಟದದೇವರು, ಘಟಪ್ರಭದ ಮಲ್ಲಿಕಾರ್ಜುನ ಶ್ರೀಗಳು ಮತ್ತಿತರರಿದ್ದಾರೆ.
Published on

ಗುಳೇದಗುಡ್ಡ : ನೀನು ಯಾವ ದೇವರನ್ನಾದರೂ ನಂಬು. ಆದರೆ ಧರ್ಮದಿಂದ ಬುದುಕು ಎನ್ನುವ ಉದಾತ್ತ ಚಿಂತನೆ ನಮ್ಮ ಭಾರತೀಯರಲ್ಲಿದೆ. ಇನ್ನೂಳಿದ ಧರ್ಮದಲ್ಲಿ ಇಂತಹ ಸ್ವಾತಂತ್ರೃಇಲ್ಲ. ಈ ಸನಾತನ ಪರಂಪರೆ ವಿಶ್ವದಲ್ಲಿಯೇ ಶ್ರೇಷ್ಠವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಶನಿವಾರ ರಾತ್ರಿ ಪಟ್ಟಣದಲ್ಲಿ ಜ. ಗುರುಸಿದ್ಧೇಶ್ವರ ಶ್ರೀಗಳ 39ನೇ ಪುಣ್ಯಾರಾಧನೆ ಅಂಗವಾಗಿ ಶರಣ ಸಂಗಮ ಸಮಾರಂಭ, ಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವ ಹಾಗೂ ಗುರುಸಿದ್ದೇಶ್ವರ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಟುಂಬ ಆಧರಿತ ಧರ್ಮವನ್ನು ನಾವು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ಆದ್ದರಿಂದ ಇಲ್ಲಿ ಶಾಂತಿ, ನೆಮ್ಮದಿ, ಸುಖ ಎಲ್ಲವೂ ಇದೆ. 11ನೇ ಶತಮಾನದಲ್ಲಿ ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ಸಮಾಜವನ್ನು ಸರಿದಾರಿಗೆ ತರಲು ಶ್ರಮಿಸಿದರು. ಅಂತಹ ಶರಣ ಪರಂಪರೆಯಲ್ಲಿ ಗುರಸಿದ್ದೇಶ್ವರ ಮಠ ಮುಂದುವರಿಯುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಎಲ್ಲರನ್ನು ಪ್ರೀತಿಸುವ ಧರ್ಮ ಹಿಂದೂ ಧರ್ಮ. ಸರ್ವ ಜನಾಂಗದ ಶಾಂತಿಯ ತೋಟ ಇಲ್ಲಿದೆ. ಎಲ್ಲರನು ಸಮಾನವಾಗಿ ಸ್ವೀಕರಿಸಿದ ಬಸವಣ್ಣ ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ. ಇದೇ ತತ್ವಾದರ್ಶಗಳನ್ನು ನಮ್ಮ ಮಠಮಂದಿರಗಳು ಸಾರುತ್ತಿವೆ ಎಂದರು.

ಹುಬ್ಬಳ್ಳಿ ಮೂರುಸಾವಿರ ಮಠದ ಡಾ.ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು, ಕಾಶೀನಾಥ ಶ್ರೀಗಳು, ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳು, ಆಳಂದದ ಶ್ರೀ ರೇವಣಸಿದ್ಧ ಪಟ್ಟದದೇವರು, ಘಟಪ್ರಭದ ಮಲ್ಲಿಕಾರ್ಜುನ ಶ್ರೀಗಳು, ಶ್ರೀಮಠದ ಜ. ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಶ್ರೀ ಗುರುಬಸವ ದೇವರು ಸಾನಿಧ್ಯವಹಿಸಿದ್ದರು.

ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಡಾ.ಅಶೋಕ ನರೋಡೆ, ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net