

ಬೆಳಗಾವಿ: ಜನಪ್ರತಿನಿಧಿಯಾಗಿ ಗ್ರಾಮಗಳನ್ನು ಸುಧಾರಣೆ ಮಾಡುವುದಷ್ಟೇ ನನ್ನ ಕೆಲಸ. ನನ್ನ ತಾಯಿ ತವರೂರು ಬಡಾಲ ಅಂಕಲಗಿ ಗ್ರಾಮದ ಬಗ್ಗೆ ವಿಶೇಷ ಗೌರವವಿದೆ ಎಂದು ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಜೋಡಿ ಮಹಾಲಕ್ಷಿ$್ಮ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿ, ಒಬ್ಬರ ಏಳಿಗೆ ಕಂಡು ಹೊಟ್ಟೆಕಿಚ್ಚು ಪಡುವವರಿಗೆ ಮದ್ದಿಲ್ಲ. ಮಾತಾಡಿ ಸಮಾಧಾನ ಮಾಡಿಕೊಳ್ಳುತ್ತಾರೆ ಎಂದರು. ಮೊದಲೆರಡು ಚುನಾವಣೆಯಲ್ಲಿ ಸೋತೆ, ಮೂರನೇ ಸಲ ನಿಂತಾಗ ಗೆದ್ದರೆ ಗುಡಿ ಕಟ್ಟಿಸಿಕೊಡುವೆ ಎಂದು ಹರಕೆ ಹೊತ್ತುಕೊಂಡಿದ್ದೆ, ಅದರಂತೆ ಗೆದ್ದ ಬಳಿಕ ಗುಡಿ ಕಟ್ಟಿಸಿಕೊಡಲು ನೆರವಾದೆ ಎಂದರು.
ಈಗಾಗಲೇ ಗ್ರಾಮಕ್ಕೆ 3ಕೋಟಿ ರೂ. ಕೆಲಸ ಮಾಡಿಕೊಡಲಾಗಿದೆ. ಈ ಬಾರಿ ಅದ್ದೂರಿಯಾಗಿ ಅಂಕಲಗಿ ಜಾತ್ರೆ ಆಚರಣೆ ಮಾಡಲಾಗಿದೆ ಎಂದರು. ರಾಚಯ್ಯ ಸ್ವಾಮೀಜಿ, ಚನ್ನಬಸವ ದೇವರು, ಸಿದ್ದು ಚಾಪಗಾಂವಿ, ಕಿರುತೆರೆಯ ಕಲಾವಿದರು, ಗ್ರಾಮದ ಹಿರಿಯರು, ಗ್ರಾಮಸ್ಥರು ಜಾತ್ರಾ ಕಮಿಟಿ ಸದಸ್ಯರಿದ್ದರು.