ಜಿಕೆವಿಕೆಯಲ್ಲಿ ಆ.25ಕ್ಕೆ ‘ಕೃಷಿಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮ

Vijayavani-Featured-Image
Published on

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಪ್ರತಿ ತಿಂಗಳ 4ನೇ ಶನಿವಾರದಂದು ಹಮ್ಮಿಕೊಳ್ಳುತ್ತಿದ್ದ ‘ಕೃಷಿ ಸಂತೆ’ ಬದಲು ಈ ಬಾರಿ ಆ.25ರಂದು (ಭಾನುವಾರ) ‘ಕೃಷಿಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವನ್ನು ಆಯೋಜಿಸಿದೆ.

ಮುಂಗಾರು ಹಂಗಾಮು ಚುರುಕು ಪಡೆದಿದ್ದು, ರೈತ ಬಾಂಧವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಕೃಷಿ ಸಂತೆಯನ್ನು ಈ ತಿಂಗಳು ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆ.25ರಂದು ‘ಕೃಷಿಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವನ್ನು ಜಿಕೆವಿಕೆಯ ಕೃಷಿ ತಂತ್ರಜ್ಞಾನ ಮತ್ತು ಮಾಹಿತಿ ಕೇಂದ್ರವು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ನೋಂದಾಯಿತ ಆಸಕ್ತರು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ಉಳುಮೆ, ಬಿತ್ತನೆ, ನರ್ಸರಿ ತಾಂತ್ರಿಕತೆಗಳು, ಪಶುಸಂಗೋಪನೆ, ಕುರಿ-ಮೇಕೆ ಸಾಕಣೆ, ಕೋಳಿ ಸಾಕಣೆ, ಎರೆಹುಳು ಗೊಬ್ಬರ ತಯಾರಿಕೆ, ಎತ್ತಿನಗಾಡಿ ಸವಾರಿ, ಜಲ ಕೃಷಿ ಮತ್ತು ರಾಶಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.

ನೊಂದಣಿ ಶುಲ್ಕ 300 ರೂ. (ಬೆಳಗಿನ ಉಪಹಾರ ಸಹಿತ) ಪಾವತಿಸಿ ಆ.23ರೊಳಗೆ ನೊಂದಣಿಗೆ ಹೆಸರು ಖಾತರಿಪಡಿಸಿಕೊಳ್ಳಬೇಕು. ಮೊದಲು ನೊಂದಣಿ ಮಾಡಿಸಿದವರಿಗೆ ಆದ್ಯತೆ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂ: 080-23330153 ಅಥವಾ 9449864251 ಸಂಪರ್ಕಿಸಬಹುದು ಎಂದು ವಿವಿ ಅಧಿಕಾರಿಗಳು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net