ಮುಂದುವರಿಯಲಿದೆ ನಮ್ಮ ಜೈತ್ರಯಾತ್ರೆ

30Huk3
Published on

ಹುಕ್ಕೇರಿ: ರೈತರು ಮತ್ತು ಗ್ರಾಹಕರ ಜೀವನಾಡಿಯಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ತಾಲೂಕಿನ ಜನ ಸ್ವಾಭಿಮಾನ ಪ್ರದರ್ಶಿಸಿದ್ದು, ದೇಶದ ಗಮನ ಸೆಳೆದಿದೆ ಎಂದು ಸಂಘದ ನಿರ್ದೇಶಕ ಪಥ್ವಿ (ಲವ) ಕತ್ತಿ ಹೇಳಿದರು.

ಸ್ಥಳೀಯ ಗುರುಶಾಂತೇಶ್ವರ ಹಿರೇಮಠದಲ್ಲಿ ದಸರಾ ಮಹೋತ್ಸವದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಹುಕ್ಕೇರಿ ತಾಲೂಕಿನ ಧುರೀಣರಾದ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಶಾಸಕ ನಿಖಿಲ ಕತ್ತಿ ನೇತತ್ವದ ವಿಜಯಯಾತ್ರೆ ಗೋಕಾಕ, ಅರಭಾವಿ ಮತ್ತು ನಿಪ್ಪಾಣಿಗೂ ವಿಸ್ತರಿಸಲಿದೆ. ಆ ತಾಲೂಕಿನ ಜನ ಹಾಗೂ ಮುಖಂಡರು ಉಸಿರುಗಟ್ಟುವ ವಾತಾವರಣದಿಂದ ಕಾಪಾಡುವಂತೆ ಸಂಪರ್ಕಿಸುತ್ತಿದ್ದಾರೆ. ಅವರ ಸಮಸ್ಯೆ ಮತ್ತು ಕುಂಠಿತ ಅಭಿವದ್ಧಿ ನಮಗೂ ಅರ್ಥವಾಗುತ್ತದೆ ಎಂದರು.

ಸಂಕೇಶ್ವರದ ಎಸ್‌ಡಿವಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ವಿನಯಗೌಡ ಪಾಟೀಲ ಮಾತನಾಡಿ, ಕತ್ತಿ, ಪಾಟೀಲ ಮನೆತನಗಳು ಒಂದಾಗಿ ರಾಜಕೀಯ ಮಾಡುವುದರಿಂದ ತಾಲೂಕಿನ ಜನತೆ ಸಂತೋಷವಾಗಿದ್ದಾರೆ. ಜನರ ಆಶಯದಂತೆ ನಾವು ಮುಂದೆ ಒಟ್ಟಾಗಿ ಜನಸೇವೆ ಮಾಡುತ್ತೇವೆ ಎಂದರು.

ಶ್ರೀಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯರು ನೂತನ ನಿರ್ದೇಶಕರಿಗೆ ಆಶೀರ್ವದಿಸಿ ಮಾತನಾಡಿ, ಅಧಿಕಾರ ಒಂದು ಅವಕಾಶ. ಅದು ಜನಸೇವೆಗೆ ಸದ್ಬಳಕೆಯಾಗಬೇಕು ಎಂದರು.

ನಿರ್ದೇಶಕರಾಗಿ ಆಯ್ಕೆಯಾದ ಪೃಥ್ವಿ ಕತ್ತಿ, ಕಲಗೌಡ ಪಾಟೀಲ, ವಿನಯ ಪಾಟೀಲ, ಶಿವಾನಂದ ಮುಡಶಿ, ಮಹಾವೀರ ನಿಲಜಗಿ, ಶಿವನಗೌಡ ಮದವಾಲ, ಅಜಿತ ಮುನ್ನೋಳಿ, ಕೆಂಪಣ್ಣ ವಾಸೇದಾರ, ಮಹಾದೇವ ಕ್ಷೀರಸಾಗರ, ಮೆಹಬೂಬಿ ನಾಯಿಕವಾಡಿ, ಮಂಗಲಾ ಮೂಡಲಗಿ, ಗಜಾನನ ಕ್ವಳ್ಳಿ, ಸತ್ಯಪ್ಪ ನಾಯಿಕ, ಶ್ರೀಮಂತ ಸನ್ನಾಯಿಕ, ಬಸವಣ್ಣಿ ಲಂಕೆಪ್ಪಗೋಳ, ಮುಖಂಡರಾದ ಶೀತಲ ಬ್ಯಾಳಿ, ಅಶೋಕ ಪಾಟೀಲ, ಪ್ರಜ್ವಲ ನಿಲಜಗಿ, ಸಂಜಯ ದೇಸಾಯಿ, ಆನಂದ ಜಿರಲಿ, ಚನ್ನಪ್ಪ ಗಜಬರ, ಸುರೇಶ ಜಿನರಾಳಿ ಇತರರಿದ್ದರು.

30-3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net