ನಾವು ಮಾಡುವ ಸೇವೆ ಶಾಶ್ವತವಾಗಿರಬೇಕು

12kls4
ಕಳಸ ಜೆಸಿಐ ಸಂಸ್ಥೆಯಿಂದ ಕಳಸ ಕೈಮರ ಜೆಸಿಐ ವೃತ್ತಕ್ಕೆ ಅಳವಡಿಸಿದ್ದ ಸೋಲಾರ್ ದೀಪವನ್ನು ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ರಮೆಶ್ ದಡಿಗಲ ಉದ್ಘಾಟಿಸಿದರು.
Published on

ಕಳಸ: ಕಳಸ ಜೆಸಿಐ ಸಂಸ್ಥೆಯಿಂದ ಕಳಸ ಕೈಮರ ಜೆಸಿಐ ವೃತ್ತಕ್ಕೆ ಅಳವಡಿಸಿದ್ದ ಸೋಲಾರ್ ದೀಪವನ್ನು ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ರಮೆಶ್ ದಡಿಗಲ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಾವು ಯಾವುದೇ ಸಂಸ್ಥೆಯಲ್ಲಿ ಇರಬಹುದು ಆದರೆ ನಮ್ಮ ಅಧಿಕಾರದ ಅವಧಿಯಲ್ಲಿ ಸಮಾಜಕ್ಕೆ ನಾವು ಶಾಶ್ವತ ಯೋಜನೆಗಳನ್ನು ರೂಪಿಸಿ ನಮ್ಮ ಹೆಸರು ಉಳಿಸುವಂತೆ ನೋಡಿಕೊಳ್ಳಬೇಕು. ಕಳಸ ಜೆಸಿಐ ಜೆಸಿಐ ವೃತ್ತ ನಿರ್ಮಿಸಿ ಅದಕ್ಕೆ ಸೊಲಾರ್ ದೀಪಗಳನ್ನು ಅಳವಡಿಸಿರುವುದು ಸಮಾಜಕ್ಕೆ ಒಂದು ಶಾಶ್ವತ ಯೋಜನೆ ರೂಪಿಸಿದಂತಾಗಿದೆ. ಸಂಸ್ಥೆಯಲ್ಲಿ ನಮ್ಮ ಇರುವಿಕೆಯನ್ನು ಕೆಲಸದ ಮೂಲಕ ತೋರಿಸಬೇಕು ಎಂದು ತಿಳಿಸಿದರು.
ಕಳಸ ಜೆಸಿಐ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಪವರ್ ಾಯಿಂಟ್ ಅವರ ಸಹಕಾರದೊಂದಿಗೆ 35 ಸಾವಿರ ರೂ ವೆಚ್ಚದಲ್ಲಿ ಸೋಲಾರ್ ದೀಪ ಅಳವಡಿಸಲಾಗಿದೆ. ಇದೇ ರೀತಿ ಕೋಟೆಮಕ್ಕಿ ಶಾಲೆಯ ಯನ್ನು ಈಗಾಗಲೇ ದತ್ತು ತೆಗೆದುಕೊಳ್ಳಲಾಗಿದೆ. ಶಾಲೆಗೆ ಟೈಲ್ಸ್, ಬಣ್ಣ ಇನ್ನಿತರ ಕೆಲಸಗಳು ನಡೆಯುತ್ತಿದೆ ಎಂದು ಹೇಳಿದರು.
ಜೆಸಿಐ ವಲಯ ನಿರ್ದೇಶಕ ಪ್ರಶಾಂತ್, ವಲಯಾಧ್ಯಕ್ಷೆ ಆಶಾ ಜೈನ್, ಜೆಸಿಐ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಸುಧಾಕರ್, ವಲಯ ನಿರ್ದೇಶಕ ಪ್ರಜ್ವಲ್‌ಜೈನ್, ಅಶೋಕ್, ಮಹೇಶ್. ಬಿ.ಕೆ.ಮಹೇಶ್, ಚರಣ್, ಸತೀಶ್, ಶಿವಪ್ರಸಾದ್, ಜಯಪ್ರಕಾಶ್, ಮಾರುತೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net