ನಮ್ಮ ಶಾಲೆಯೆಂಬ ಕಾಳಜಿ ಇರಲಿ - ಮಹಾದೇವಪ್ಪ ಯಾದವಾಡ

0102
Published on

ರಾಮದುರ್ಗ: ಮಕ್ಕಳ ಜ್ಞಾನ ಭಂಡಾರ ಹೆಚ್ಚಿದಾಗ ಮಾತ್ರ ಒಳ್ಳೆಯ ಸಂಸ್ಕೃತಿ, ನಡೆನುಡಿ ಬರಲು ಸಾಧ್ಯ. ಗ್ರಾಮೀಣ ಪ್ರದೇಶದ ಜನತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಲು ಸರ್ಕಾರಿ ಶಾಲೆಗಳ ಬಗ್ಗೆ ಅಗತ್ಯ ಕಾಳಜಿ ಹೊಂದಬೇಕು. ಆ ನಿಟ್ಟಿನಲ್ಲಿ ತಾಲೂಕಿನ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಭರವಸೆ ನೀಡಿದ್ದಾರೆ.

ಭಾನುವಾರ ತಾಲೂಕಿನ ರೊಕ್ಕದಕಟ್ಟಿ ಸಮೀಪದ ಯರಗಟ್ಟಿ-ಮುಧೋಳ ರಾಜ್ಯ ಹೆದ್ದಾರಿಯ 43.4ರಲ್ಲಿ 2.59 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣ, 11 ಲಕ್ಷ ರೂ. ವೆಚ್ಚದಲ್ಲಿ ಪಂಚಗಾವ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿ, 22 ಲಕ್ಷ ರೂ. ವೆಚ್ಚದಲ್ಲಿ ಕುಳ್ಳೂರ ಹಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿ, 11 ಲಕ್ಷ ರೂ. ವೆಚ್ಚದಲ್ಲಿ ಕಮಕೇರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿ ನಿರ್ಮಾಣ ಹಾಗೂ 30 ಲಕ್ಷ ರೂ. ವೆಚ್ಚದಲ್ಲಿ ಹೊಸಕೋಟಿ ಎಸ್‌ಸಿ
ಕಾಲನಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕುಳ್ಳೂರ ಗ್ರಾಮದ ಜನತೆಯ ಬಹುದಿನಗಳ ಬೇಡಿಕೆಯಾದ ಶಾಲಾ ಕೊಠಡಿ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿದ್ದೇನೆ. ಗ್ರಾಮದ ಪ್ರತಿಯೊಬ್ಬ
ರಲ್ಲೂ ನಾನು, ನನ್ನ ಗ್ರಾಮ ಎಂಬ ಕಾಳಜಿ ಬರಬೇಕು. ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳು ನಮ್ಮ ಮಕ್ಕಳು, ನಮ್ಮವರು ಎಂಬ ಮನೋಭಾವ ಮೂಡಬೇಕು. ಅಂದಾಗ ಮಾತ್ರ ಗ್ರಾಮ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕುಳ್ಳೂರ ಶಿವಯೋಗೀಶ್ವರ ಮಠದ ಬಸವಾನಂದ ಸ್ವಾಮೀಜಿ, ಜಿಪಂ ಸದಸ್ಯ ಕೃಷ್ಣಪ್ಪ ಲಮಾಣಿ, ಈರನಗೌಡ ಪಾಟೀಲ, ಮಹಾದೇವಪ್ಪ ಚೌದರಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪಾಸಿಗೌಡ ಪಾಟೀಲ, ತಾಪಂ ಸದಸ್ಯೆ ವಿಜಯಲಕ್ಷ್ಮೀ ನಾಡಗೌಡರ, ಪರಶುರಾಮ ಬಾರ್ಕಿ, ಬಸವರಾಜ ಯಾದವಾಡ, ಸಂಗಪ್ಪ ಅರಕೇರಿ, ಯಲ್ಲಪ್ಪ ಕುಳ್ಳೂರ, ಸೋಮಲಿಂಗಪ್ಪ ಲಕ್ಷ್ಯಾಣಿ, ಜಿ.ಎಸ್.ಶೆಟ್ಟೆಣ್ಣನವರ, ಯಲ್ಲಪ್ಪ ಅವರಾದಿ, ಬಂಡಿವಡ್ಡರ, ಲೋಕೋಪಯೋಗಿ ಎಇಇ ಆರ್.ಝಡ್.ಸೊಲ್ಲಾಪುರ, ಪಿಆರ್‌ಇಡಿ ಎಇಇ ಎಂ.ಐ.ಕೋಳಿ, ಇಂಜಿನಿಯರ್ ಬಿ.ಐ.ಕರ್ಕಿ, ಗುತ್ತಿಗೆದಾರ ವಿಜಯ ಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net