ನಮ್ಮ ದಾದಿಯರು ನಮ್ಮ ಭವಿಷ್ಯ

Our nurses are our future
ಶುಶ್ರೂಷಕರ ದಿನಾಚರಣೆ ಅಂಗವಾಗಿ ಬಾಗಲಕೋಟೆ ನಗರದ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಕುಮಾರೇಶ್ವರ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಮತ್ತು ಹಣ್ಣಿನ ರಸ ವಿತರಿಸಲಾಯಿತು. ಕುಮಾರೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಮಾನಸಿಕ ಶುಶ್ರೂಷಾ ವಿಭಾಗದ ಮುಖ್ಯಸ್ಥ ಡಾ. ಶ್ರೀಹರ್ಷ ಸಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಿಲೀಪ್ ಎಸ್. ನಾಟೇಕರ ಇತರರು ಇದ್ದರು.
Published on

ಬಾಗಲಕೋಟೆ: ನರ್ಸಿಂಗ್ ಸಿಬ್ಬಂದಿಗಳ ಸೇವೆ, ಕೊಡುಗೆ ಅಪಾರವಾಗಿದೆ. ರೋಗಿಗಳ ಜೀವ ಉಳಿಸುವ ಸಾರಥಿಗಳು ಅವರು. ನಮ್ಮ ದಾದಿಯರು ನಮ್ಮ ಭವಿಷ್ಯ ಎಂದು ಕುಮಾರೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಹೇಳಿದರು.

ನಗರದ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ಲಾರೆನ್ಸ್ ನೈಟಿಂಗೇಲ್ ಜನ್ಮ ದಿನದ ಅಂಗವಾಗಿ ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುಮಾರೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ ಮಾತನಾಡಿ, ನರ್ಸಿಂಗ್ ಸಿಬ್ಬಂದಿಯ ಪರಿಶ್ರಮ ಮರೆಯಲಾಗದು. 2021 ರ ಕೋವಿಡ್ 19 ಸಂದರ್ಭದಲ್ಲಿ 16 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಕೋವಿಡ್ 19 ನಿಂದ ನರಳಿದ್ದಾರೆ ಮತ್ತು 2700 ಕ್ಕೂ ಹೆಚ್ಚು ನರ್ಸಿಂಗ್ ಸಿಬ್ಬಂದಿ ಸೋಂಕಿಗೆ ತುತ್ತಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನರ್ಸಿಂಗ್ ಸಿಬ್ಬಂದಿಯ ನಿಸ್ವಾರ್ಥ ಸೇವೆಯಿಂದ ಅನೇಕ ರೋಗಿಗಳ ಜೀವ ಉಳಿಯುತ್ತಿದೆ ಎಂದು ಹೇಳಿದರು.

ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಮಾನಸಿಕ ಶುಶ್ರೂಷಾ ವಿಭಾಗದ ಮುಖ್ಯಸ್ಥ ಡಾ. ಶ್ರೀಹರ್ಷ ಸಿ ಮಾತನಾಡಿ, ಶುಶ್ರೂಷಕರ ಸೇವೆಗೆ ಎಲ್ಲರೂ ತಲೆ ಬಾಗಿಸಬೇಕು. ರೋಗಿಗಳ ಆರೋಗ್ಯ ಪಾಲನೆಯಲ್ಲಿ ವೈದ್ಯರಷ್ಟೆ ನರ್ಸಗಳ ಪಾತ್ರವು ಪ್ರಮುಖವಾಗಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ನರ್ಸಗಳಿಗೆ ಅಪಾರ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಕೌಶಲ ಬೆಳೆಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ನರ್ಸಿಂಗ್ ಫೌಂಡೇಶನ್ ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತ ಕುಲಕರ್ಣಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ವೈದ್ಯರಷ್ಟೆ ಅಲ್ಲದೇ ಶುಶ್ರೂಷಕರಿಗೂ ಕೂಡ ಸಮಾನವಾಗಿ ಆರ್ಥಿಕತೆಯಲ್ಲಿ ಪ್ರಭಲತೆಯನ್ನು ನೀಡಬೇಕು ಮತ್ತು ಇತ್ತೀಚಿನ ದಿನಗಳಲ್ಲಿ ವಿಭಿನ್ನ ಕ್ಷೇತ್ರಗಳಲ್ಲಿ ಶುಶ್ರೂಷಕರಿಗೆ ಬಹಳಷ್ಟು ಅವಕಾಶಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಿಲೀಪ್ ಎಸ್. ನಾಟೇಕರ ಮಾತನಾಡಿ, ಶುಶ್ರೂಷಕರನ್ನು ಗೌರವಿಸಲು ಮತ್ತು ಅವರ ಸೇವೆಯ ಅಸಾಧಾರಣ ಕೊಡುಗೆಯನ್ನು ಪ್ರಶಂಸಿಸಲು ಪ್ರತಿ ವರ್ಷ ಮೇ 12 ರಂದು ಅಂತರಾಷ್ಟ್ರೀಯ ಶುಶ್ರೂಷಕರ ದಿನವೆಂದು ಆಚರಿಸಲಾಗುತ್ತಿದೆ. ಶುಶ್ರೂಷಕರು ಹಿಂದಿನ ಕಾಲದಿಂದಲೂ ತಾಯಿಯ ಸ್ಥಾನದಲ್ಲಿ ನಿಂತು ಸೇವೆ ಮಾಡುತ್ತಾ ಬಂದಿದ್ದಾರೆ. 1854 ರಲ್ಲಿ ಕ್ರಿಮಿಯನ್ ಯುದ್ಧ ನಡೆದಾಗ, ಶುಶ್ರೂಷಕಿ ಪ್ಲಾರೆನ್ಸ್ ನೈಟಿಂಗೇಲ್ ಮುಂದಾಳತ್ವ ವಹಿಸಿ, ಯೋಧರನ್ನು ರೋಗದಿಂದ ಗುಣಮುಖರಾಗುವಂತೆ ಮಾಡಿದರು. ಅವರ ನೆನಪಿಗಾಗಿ ದಿನಾಚರಣೆ ಆಚರಿಸಾಗುತ್ತಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ಕುಮಾರೇಶ್ವರ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಮತ್ತು ಹಣ್ಣಿನ ರಸವನ್ನು ವಿತರಿಸಲಾಯಿತು.

ಚಿತ್ರಶಿರ್ಷಿಕೆ: ಬಿಕೆಟಿ-14-9: ಶುಶ್ರೂಷಕರ ದಿನಾಚರಣೆ ಅಂಗವಾಗಿ ಬಾಗಲಕೋಟೆ ನಗರದ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಕುಮಾರೇಶ್ವರ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಮತ್ತು ಹಣ್ಣಿನ ರಸ ವಿತರಿಸಲಾಯಿತು. ಕುಮಾರೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಮಾನಸಿಕ ಶುಶ್ರೂಷಾ ವಿಭಾಗದ ಮುಖ್ಯಸ್ಥ ಡಾ. ಶ್ರೀಹರ್ಷ ಸಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಿಲೀಪ್ ಎಸ್. ನಾಟೇಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net