ಜಮ್ಮನಕಟ್ಟಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಸೌಕರ್ಯ ಒದಗಿಸುವುದು ನಮ್ಮ ಧ್ಯೇಯ

Our mission is to provide driving facilities for various works in Jammanakatti.
Published on

ಕೆರೂರ:ಗ್ರಾಮೀಣ ಭಾಗದ ಜನರಿಗೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ೇತ್ರದ ಹಲವು ಕಡೆಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಸಮೀಪದ ಜಮ್ಮನಕಟ್ಟಿ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಸಿಎಂ ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿಗೆ ಬದ್ಧರಾಗಿದ್ದು, ರಾಜ್ಯ ಸರ್ಕಾರ ಹಿಂದುಳಿದವರ, ರೈತರ, ಕೂಲಿ ಕಾರ್ಮಿಕರ, ಏಳ್ಗೆಗಾಗಿ ಶ್ರಮಿಸುತ್ತಿದೆ.

ಗ್ಯಾರಂಟಿಗಳನ್ನು ಸಮರ್ಪಕವಾಗಿ ಒದಗಿಸುವುದರ ಜೊತೆಗೆ ಜನತೆಗೆ ಬೇಕಾಗುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುತ್ತಿದ್ದು, ಜನರು ಕಾಂಗ್ರೆಸ್​ ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗುತ್ತಿಗೆದಾರರು ಕಾಮಗಾರಿ ಕಳಪೆಯಾಗದಂತೆ ನೋಡಿಕೊಂಡು ನಿಗದಿತ ವೇಳೆಗೆ ಕಾಮಗಾರಿ ಮುಗಿಸಬೇಕು ಎಂದರು.

ಪೂಜಾ ಸಮಾರಂಭದಲ್ಲಿ ಮುಖಂಡರಾದ ಧರ್ಮಣ್ಣ ಭಗವತಿ, ಮಾಜಿ ಗ್ರಾ.ಪಂ. ಅಧ್ಯ ಸಂಜೀವ ಚಿಮ್ಮನಕಟ್ಟಿ, ತಾಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಕಲಾದಗಿ ಎಸ್​.ಕೆ. ದಳವಾಯಿ, ಎಚ್​.ಎಚ್​. ಜಲಗೇರಿ, ನಿಂಗಪ್ಪ ದಳವಾಯಿ, ಮಲ್ಲಮ್ಮ ಕೊಳ್ಳಿ, ರಂಗಪ್ಪ ಹೊಸಗೌಡರ, ಗ್ರಾ.ಪಂ. ಅಧ್ಯ ರಾಜಣ್ಣ ಬುಳ್ಳಾ, ಪಿಡಿಒ ಕೈಲಾಸ ಕುಂಬಾರ, ಗುತ್ತಿಗೆದಾರ ಆರ್​.ಎಚ್​. ರಾಥೋಡ್​ ಉಪಸ್ಥಿತರಿದ್ದರು.

ಜಮ್ಮನಕಟ್ಟಿ ಕಾಮಗಾರಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ಧರ್ಮಣ್ಣ ಭಗವತಿ, ಮಾಜಿ ಗ್ರಾ.ಪಂ. ಅಧ್ಯ ಸಂಜೀವ ಚಿಮ್ಮನಕಟ್ಟಿ, ತಾಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಕಲಾದಗಿ ಎಸ್​.ಕೆ. ದಳವಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net