

ಬೆಂಗಳೂರು: ನಮ್ಮ ಮನಸ್ಸೇ ನಮಗೆ ಬಂಧು ಮತ್ತು ಶತ್ರುವಾಗಿದೆ. ಹೀಗಾಗಿಯೇ ಮನಸ್ಸನ್ನು ಹತೋಟಿಯಲ್ಲಿಟ್ಟಾಗ ಬುದ್ಧಿ ಬೆಳೆಯಲಿದೆ ಎಂದು ದೇಶದ ಋಷಿ ಪರಂಪರೆಯು ಸಾರಿ ಹೇಳಿತ್ತು ಎಂದು ಹಿರಿಯ ನಟ ಡಾ. ಶ್ರೀಧರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಲೇಖಕ ಜಯಪ್ರಕಾಶ್ ನಾಗತಿಹಳ್ಳಿ ರಚಿಸಿ ಸಪ್ನಾ ಬುಕ್ ಹೌಸ್ ಪ್ರಕಟಿಸಿರುವ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಹಣ, ಸಂಪತ್ತು ಬೇಕು ಎಂದು ಕೇಳುವವರ ಮಧ್ಯೆ ದೇಶದ ಸಂಸ್ಕೃತಿಯಲ್ಲಿ ಮನುಷ್ಯನ ಧೀಶಕ್ತಿಯನ್ನು ಬೆಳೆಸುವ, ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ, ಮೌಲ್ಯಗಳನ್ನು ಕೊಡುಗೆ ನೀಡುವ ಬಗ್ಗೆ ಉತ್ಕೃಷ್ಟ ಸ್ಥಾನ ನೀಡಲಾಗಿದೆ. ವ್ಯಕ್ತಿತ್ವವನ್ನು ಅರಳಿಸುವುದು, ಒಳಗಿನ ಸತ್ವವನ್ನು ಬೆಳೆಸುವ ಪ್ರಜ್ಞೆ ದೊಡ್ಡ ಕೊಡುಗೆಯಾಗಿದೆ ಎಂದರು.
ಭಗವದ್ಗೀತೆಯು ಹೊರನೋಟದಲ್ಲಿ ಸನ್ಯಾಸಿಯಾಗು ಎಂದು ಹೇಳಿದೆ ಎನಿಸಿದರೂ ಕಾರ್ಯೋನ್ಮುಖವಾಗುವಂತೆ ಹೇಳಿಕೊಡುತ್ತದೆ. ನಮ್ಮ ಬೆಳವಣಿಗೆ ನಮ್ಮಿಂದಲೇ ಆಗಬೇಕು, ನಮ್ಮ ಮನಸ್ಸೇ ನಮಗೆ ಬಂಧು ಮತ್ತು ಶತ್ರುವಾಗಿದೆ. ಆತ್ಮವನ್ನು ಅರಿತು ನಿಮ್ಮನ್ನು ನೀನು ಅರಿತಿಕೊ ಎಂದು ಹೇಳುತ್ತದೆ. ಅದನ್ನೇ ಋಷಿ ಪರಂಪರೆಯೂ ಹೇಳುತ್ತದೆ ಎಂದರು.
ಜಯಪ್ರಕಾಶ್ ಅವರು ಜೀವನವನ್ನು ಪರಿವರ್ತನೆಗೊಳಿಸುವ ಪುಸ್ತಕಗಳನ್ನು ಬರೆದಿದ್ದಾರೆ. ಮನುಷ್ಯ ಹೇಗೆಲ್ಲ ಸ್ಫೂರ್ತಿಗೊಳ್ಳಬಹುದು ಎಂಬುದಕ್ಕೆ ಈ ಪುಸ್ತಕಗಳು ಸಾಕ್ಷಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಹಾಗೂ ಚಾಣಕ್ಯ ಕೆರಿಯರ್‌ಅಕಾಡೆಮಿ ಸ್ಥಾಪಕ ಎನ್.ಎಂ. ಬಿರಾದರ್ ಉಪಸ್ಥಿತರಿದ್ದರು.
ತರಬೇತಿಯಿಂದ ಯಶಸ್ಸು ಟ್ರಾನ್‌ಸ್ಾರ್ಮ್ ಯುವರ್ ಲ್ೈ ಇನ್ಸಟಾಂಟ್‌ಲಿ ಅನ್‌ಲಾಕ್ ದಟ್ ಪವರ್ ಆ್ ಯೂನಿಕ್‌ನೆಸ್ ಪರ್ಸನಾಲಿಟಿ ಟ್ರಾನ್‌ಸ್ಾರ್ಮ್ ಯೂ