ನಮ್ಮ ಬಹುದಿನದ ಬೇಡಿಕೆ ಈಡೇರಲಿದೆ

Our long-standing demand will be fulfilled.
Published on

ಕಲಾದಗಿ:ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತು ಚರ್ಚಿಸಲು ವಿಶೇಷ ಸಚಿವ ಸಂಪುಟ ಸಭೆಯನ್ನು ಸೆ.16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದಾರೆ. ನಮ್ಮ ಕೃಷ್ಣಾ ಸಂತ್ರಸ್ತರ ಬಹುದಿನದ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದ್ದಾರೆ.ಗುರುವಾರ ಸಂಜೆ ವಿಜಯವಾಣಿಗೆಯೊಂದಿಗೆ ಮಾತನಾಡಿದ ಅವರು, ಬುಧವಾರ ನಡೆದ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ವಿಶೇಷ ಸಭೆ ನಡೆಸುವ ನಿರ್ಧಾರ ಪ್ರಕಟಿಸಿದ್ದಾರೆ. ಕೃಷ್ಣಾ ಸಂತ್ರಸ್ತರ ಬೇಡಿಕೆ, ಯೋಜನೆ ಅನುಷ್ಠಾನ ಕುರಿತು ನಮ್ಮೆಲ್ಲರ ಆಶಯದಂತೆ ಚರ್ಚೆಯಾಗಿರುವುದು ಸಂತೋಷವಾಗಿದೆ ಎಂದರು. ವಿಶೇಷ ಸಭೆಯಲ್ಲಿನ ನಿರ್ಧಾರಗಳಿಂದ ನಮ್ಮ ಬಹುದಿನದ ಬೇಡಿಕೆ ಈಡೇರುವ ಸಾಧ್ಯತೆ ನಿಚ್ಚಳವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೆಎಲ್​ಡಿಜಿ&11&1:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net