

ಸಿಂದಗಿ: ಮತಕ್ಷೇತ್ರದಲ್ಲಿ ಒಟ್ಟು 11 ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಮತ್ತು ಎರಡು ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿರುವ ನಮ್ಮ ಸರ್ಕಾರವು ಶೈಕ್ಷಣಿಕ ಬದ್ಧತೆ ಹೆಚ್ಚಿಸಿಕೊಂಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಬೋರಗಿ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಉನ್ನತೀಕರಣ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿನ ಮಕ್ಕಳಿಗೆ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಬಟ್ಟೆ ಹಾಗೂ ಪುಸ್ತಕ ವಿತರಣೆ ಮಾಡಿ, ಶಿಕ್ಷಣ ನಮಗೆ ಜ್ಞಾನ, ಕೌಶಲ ಮತ್ತು ಜೀವನ ಮೌಲ್ಯಗಳನ್ನು ಬಿತ್ತುತ್ತದೆ. ನೈತಿಕ ಜೀವನದ ಮೌಲ್ಯಗಳನ್ನು ನಿರೂಪಿಸುತ್ತದೆ. ಶಿಕ್ಷಣದಿಂದಲೇ ಸಾರ್ಥಕ ಜೀವನ ಸಾಧ್ಯ ಎಂದರು.
ಸಿದ್ರಾಮಯ್ಯ ಸ್ವಾಮಿಗಳು ಬ್ಯಾಡಗಿಹಾಳ, ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಜಿಲ್ಲಾ ಕೆಡಿಪಿ ಸದಸ್ಯ ಶಿವಣ್ಣ ಕೊಟರಗಸ್ತಿ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ಮುಖ್ಯಶಿಕ್ಷಕ ಎಲ್.ವೈ. ಹಿಪ್ಪರಗಿ, ಗ್ರಾಮ ಅಧ್ಯಕ್ಷರ ಪ್ರತಿನಿಧಿ ಕಟ್ಟಿಮನಿ, ಶಂಕರೆಪ್ಪ ಸಾವಳಸಂಗ, ಸಿದಲಿಂಗ ಗುಂಡಾಪುರ, ರಮೇಶ ಗುಬ್ಬೆವಾಡ, ಎಪಿಎಂಸಿ ನಿರ್ದೇಶಕರ ಸದ್ದಾಂ ಗುಬ್ಬೆವಾಡ, ದಯಾನಂದ ನಾಲವಾರ, ಬಸವರಾಜ ಚಾವರ, ರಾಮಚಂದ್ರ ರಾಠೋಡ, ಬಸವರಾಜ ದ್ಯಾಪುರ, ಶಂಕರ ತೆಲಗಣಿ, ಅಶೋಕ ಬಿಜಾಪುರ, ವಿಶ್ವನಾಥ ಹಗಟಗಿ ಇತರರಿದ್ದರು.