

ಇಳಕಲ್ಲ: ಇಲ್ಲಿಯ ರಾಮಾನುಜಾಚಾರ್ಯ ಫೌಂಡೇಷನ್ ವತಿಯಿಂದ ಮಾಹೇಶ್ವರಿ ಚಿಕ್ಕ ಮಕ್ಕಳ ಆಸ್ಪತ್ರೆಯಲ್ಲಿ ಸೀಳು ತುಟಿ, ಸೀಳು ಅಂಗಳ ಪೀಡಿತರ ಗುರುತಿಸುವಿಕೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಅಭಿಯಾನಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಆಸ್ಪತ್ರೆ ವೈದ್ಯ ಡಾ. ಪವನಕುಮಾರ ದರಕ ಮಾತನಾಡಿ, ಸೀಳು ತುಟಿ ಪೀಡಿತರಿಗೆ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಪ್ರಾರಂಭಿಸಿದ್ದು, ತಾಲೂಕಿನ ಮತ್ತು ಸುತ್ತಮುತ್ತಲಿನ ರೋಗ ಪೀಡಿತ ಮಕ್ಕಳ ಮುಖದಲ್ಲಿ ಸಂತಸ ಮೂಡಿಸುವುದೇ ನಮ್ಮ ಗುರಿ ಎಂದು ಹೇಳಿದರು.
ಇದನ್ನೂ ಓದಿ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಸ್ಫೂರ್ತಿ
ಕಲಬುರಗಿಯ ಡಾ. ಅಶ್ವಿನ ಶಾಹ ಶಿಬಿರ ಉದ್ಘಾಟಿಸಿ, ರೋಗದ ಗುಣ ಲಕ್ಷಣಗಳು ಮತ್ತು ಅದರಿಂದ ಹೇಗೆ ಪಾರಾಗುವುದು, ಪಾಲಕರ ಹೊಣೆಗಾರಿಕೆ ಏನು ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಸಮಾಜ ಸೇವಕ ರಾಜು ಬೋರಾ, ಡಾ. ಮಂಜುನಾಥ ಗೊಂಡಬಾಳ ಸೇರಿ ಪ್ರಮುಖರನ್ನು ಸನ್ಮಾನಿಸಲಾಯಿತು.
ರಾಮಾನುಜಾಚಾರ್ಯ ಫೌಂಡೇಷನ್ ಪದಾಧಿಕಾರಿಗಳಾದ ಸಂದೀಪ ಮೆಹ್ತಾ, ಮನೋಹರ ಕರವಾ, ವಿಷ್ಣು, ರಾಹುಲ್ ದರಕ, ಜಯಪ್ರಕಾಶ ನಾವಂದರ್, ಗೋಕುಲ ದರಕ ಉಪಸ್ಥಿತರಿದ್ದರು. ವಿಮಲಾ ತಾಪಡಿಯಾ ಮತ್ತು ಶೋಭಾ ಲಾಹೋಟಿ ಪ್ರಾರ್ಥಿಸಿದರು. ಡಾ.ರಶ್ಮಿ ದರಕ ಸ್ವಾಗತಿಸಿದರು. ವಿಜಯ ಕುಲಕರ್ಣಿ ನಿರೂಪಿಸಿದರು. ಶ್ರೀರಾಮ ತಾಪಡಿಯಾ ವಂದಿಸಿದರು.