ಭಾಷೆಯಿಂದ ಸಂಸ್ಕೃತಿ ಉಳಿವು

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಭಾಷೆ ಉಳಿದಾಗ ಮಾತ್ರ ಸಂಸ್ಕೃತಿ ಉಳಿಯುವುದು. ಇಲ್ಲವಾದಲ್ಲಿ ಆ ನಾಡ ಸಂಸ್ಕೃತಿ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಸಾಹಿತಿ ಮತ್ತು ಕನ್ನಡ ಪರ ಚಿಂತಕ ವೆಂಕಟೇಶ ಮರೇಗುದ್ದಿ ಹೇಳಿದರು.

ನಗರದ ಕಾಳಮ್ಮನ ಅಗಸಿ ಶ್ರೀ ಕಾಳಿಕಾ ಸೇವಾ ಮಂಡಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಳಿಕಾ ಸಮ್ಮಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾಡ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.

ಶ್ರೀ ಕಾಳಿಕಾ ಸಮ್ಮಾನ ಪ್ರಶಸ್ತಿ ಸ್ವೀಕರಿಸಿದ ಕೇಂದ್ರ ಅಬಕಾರಿ ಇಲಾಖೆಯ ಸಹಾಯಕ ಆಯುಕ್ತ ವೇದಮೂರ್ತಿ ಶಂಕರಾಚಾರ್ಯ ಕಡ್ಲಾಸ್ಕರ ಮಾತನಾಡಿ, ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಿದಾಗ ಮಾತ್ರ ಅವರು ಉತ್ತಮ ಬದುಕು ಸಾಗಿಸಿ, ಒಳ್ಳೆಯ ಪ್ರಜೆಗಳಾಗುವರು ಎಂದು ಹೇಳಿದರು.

ಭಾರತದ ಎಲ್ಲ ಶಾಸ್ತ್ರಗಳು ವೈಜ್ಞಾನಿಕವಾಗಿವೆ ಎಂದು ಮತ್ತೋರ್ವ ಶ್ರೀ ಕಾಳಿಕಾ ಸಮ್ಮಾನ ಪ್ರಶಸ್ತಿ ಪುರಸ್ಕೃತ ವೇದಮೂರ್ತಿ ಡಾ. ವೀರಭದ್ರ ಆಚಾರ್ಯ ದೇವಪೂರ ಎಂದರು.

ಶ್ರೀ ನಾಗಮೂರ್ತಿ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮಂಡಳಿಯ ಹಿರಿಯರಾದ ಭಾಸ್ಕರ ಚವಟಿ, ವೇದಮೂರ್ತಿ ಮುಕುಂದಾಚಾರ್ಯ, ವೇದಮೂರ್ತಿ ಸೋಮಾಚಾರ್ಯ ಕಡ್ಲಾಸ್ಕರ, ಮಧುಕರ ಗುಳೇದಗುಡ್ಡ, ಆನಂದ ಕಮಡೊಳ್ಳಿ, ಶಂಕರ ನಿಡಗುಂದಿ, ಮಂಜುನಾಥ ಮರೇಗುದ್ದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net