ನಮ್ಮ ಸಂವಿಧಾನ ಯಾರಿಗೂ ಕೆಡಕುಂಟು ಮಾಡಲ್ಲ

Constitution Campaign
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಜಿ.ವೆಂಕಟೇಶ್ ಉಪನ್ಯಾಸ ನೀಡಿದರು. ಮಧು ಬಂಗಾರಪ್ಪ, ಬಲ್ಕಿಷ್ ಬಾನು, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಎಸ್.ರವಿಕುಮಾರ್, ಇಕ್ಕೇರಿ ರಮೇಶ್, ಶಿವಣ್ಣ, ಕೆ.ಆರ್.ಶ್ರೀಧರ್, ಎಚ್.ಸಿ.ಯೋಗೇಶ್, ಡಾ. ಶ್ರೀನಿವಾಸ್ ಕರಿಯಣ್ಣ, ವಿಜಯಕುಮಾರ್ ಸಂತೆಕಡೂರು, ಶಿವಕುಮಾರ್, ಜಿ.ಡಿ.ಮಂಜುನಾಥ, ನಾಗರಾಜ್ ಕಂಕಾರಿ ಇದ್ದರು.
Published on

ಶಿವಮೊಗ್ಗ: ಮನುಷ್ಯರಿಗೆ ಮನುಷ್ಯತ್ವ ಕಲಿಸುವುದೇ ಸಂವಿಧಾನ. ಮನುಷ್ಯತ್ವ ಕೆಟ್ಟರೆ ಸಂವಿಧಾನ ಕೆಟ್ಟಂತಲ್ಲ. ಅಂಬೇಡ್ಕರ್ ರಚಿಸಿದ ಸಂವಿಧಾನ ಯಾವತ್ತೂ ಕೆಡುವುದಿಲ್ಲ. ಯಾರಿಗೂ ಕೆಡಕು ಮಾಡುವುದಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಜಿ.ವೆಂಕಟೇಶ್ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ಶನಿವಾರ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗ, ಪರಿಶಿಷ್ಟ ಜಾತಿ ವಿಭಾಗ, ಪರಿಶಿಷ್ಟ ಪಂಗಡ ವಿಭಾಗ, ಅಲ್ಪಸಂಖ್ಯಾತರ ವಿಭಾಗಗಳಿಂದ ಸಂವಿಧಾನ ರಕ್ಷಕ್ ಅಭಿಯಾನದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮನುಷ್ಯನನ್ನು ಉತ್ತಮ ಮನುಷ್ಯನನ್ನಾಗಿಸುವುದೇ ಸಂವಿಧಾನದ ಮುಖ್ಯ ಉದ್ದೇಶವಾಗಿದೆ ಎಂದರು.

ಸ್ವಾತಂತ್ರ, ಸಮಾನತೆಯ ಮುಖ್ಯ ತತ್ವಗಳು ಸಂವಿಧಾನದಲ್ಲಿವೆ. ಸಂವಿಧಾನವನ್ನು ಸಂವಿಧಾನವೇ ರಕ್ಷಣೆ ಮಾಡಿಕೊಳ್ಳುತ್ತದೆ. ಮೂಲ ಉದ್ದೇಶಗಳಿಗೆ ಯಾವುದೇ ಚ್ಯುತಿಯಾಗದಂತೆ ಬದಲಾವಣೆ ಮಾಡಬಹುದು. ಇದು ಮನುಷ್ಯರ ಮಾನವೀಯತೆಯನ್ನು ಪ್ರತಿಬಿಂಬಿಸುವ ಸ್ವರೂಪವು ಆಗಿದೆ. ಭಾರತಕ್ಕೆ ಒಳ್ಳೆಯ ಹೆಸರು ಬರುವುದಕ್ಕೆ ಕಾರಣ ಸಂವಿಧಾನ. ಅದನ್ನು ಉಳಿಸಿ, ಅದರಲ್ಲಿರುವ ಆಶಯಗಳನ್ನು ಅರಿತು ಮುನ್ನಡೆಯಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಯಾನ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಪ್ರಸ್ತಾವಿಕ ಮಾತನಾಡಿದರು. ಎಂಎಲ್‌ಸಿ ಬಲ್ಕಿಶ್ ಬಾನು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಒಬಿಸಿ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್, ಎಸ್‌ಇ ಘಟಕದ ಜಿಲ್ಲಾಧ್ಯಕ್ಷ ಶಿವಣ್ಣ, ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಕೆ.ಆರ್.ಶ್ರೀಧರ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮುಜಾಮಿಲ್ ಪಾಷಾ, ಮುಖಂಡರಾದ ಎಚ್.ಸಿ.ಯೋಗೇಶ್, ಡಾ. ಶ್ರೀನಿವಾಸ್ ಕರಿಯಣ್ಣ, ವಿಜಯಕುಮಾರ್ ಸಂತೆಕಡೂರು, ಶಿವಕುಮಾರ್, ಜಿ.ಡಿ.ಮಂಜುನಾಥ, ಮಧು, ಶಂಕರಘಟ್ಟ ರಮೇಶ್, ನಾಗರಾಜ್ ಕಂಕಾರಿ, ಸುವರ್ಣ ನಾಗರಾಜ್, ಭಾರತಿ ರಾಮಕೃಷ್ಣ, ವಿಜಯಲಕ್ಷ್ಮೀ ಪಾಟೀಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net