

ಕೋಟ: ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ, ಅಂಗ ಸಂಸ್ಥೆ ಸಾಲಿಗ್ರಾಮ ವತಿಯಿಂದ ಇತ್ತೀಚೆಗೆ ‘ಆಷಾಢದಲ್ಲಿ ನಮ್ಮ ಚಾವಡಿ’ ಎಂಬ ವಿಶೇಷ ಕಾರ್ಯಕ್ರಮ ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದ ಕೂಟ ಬಂಧು ಭವನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾದ ಶಾಂತಾ ಐತಾಳ ಕೋಟತಟ್ಟು, ರಮಾ .ಎಸ್.ಎನ್.ಉಪಾಧ್ಯ ಗುಂಡ್ಮಿ, ಗಾಯತ್ರಿ ಹೊಳ್ಳ ಪಾಂಡೇಶ್ವರ, ಮೂಕಾಂಬಿಕಾ ಮಯ್ಯ ಹರ್ತಟ್ಟು ಸಂವಾದ ನಡೆಸಿದರು.
ಆಷಾಢ ಸಂಭ್ರಮವನ್ನು ವಿಶೇಷ ತಿನಿಸುಗಳೊಂದಿಗೆ ಹಂಚಿಕೊಳ್ಳಲಾಯಿತು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದಾ ಸಿ.ಹೊಳ್ಳ ಸ್ವಾಗತಿಸಿದರು. ಕಾರ್ಯಕರ್ತರಾದ ಸಮಂಗಲಿ ನಾವಡ, ಲತಾ ಹೊಳ್ಳ ನಿರೂಪಿಸಿದರು. ಉಪಾಧ್ಯಕ್ಷೆ ವಿಜಯಲಕ್ಷ್ಮೀ ತುಂಗ ವಂದಿಸಿದರು.