ವಿದ್ಯುತ್, ನೀರಿನ ಹಿತಮಿತ ಬಳಕೆಯಿಂದ ಸುಸ್ಥಿರ ಅಭಿವೃದ್ಧಿ

13 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರತಿಯೊಬ್ಬ ವಿದ್ಯಾರ್ಥಿ ಒಂದು ಗಿಡ ನೆಟ್ಟು ಪೋಷಿಸಿದರೆ ಅದು ಮರವಾಗಿ ನಮ್ಮ ಕಾಳಜಿ ಮಾಡುತ್ತದೆ. ಇತಿಮಿತಿಯಿಂದ ನೀರು ಮತ್ತು ವಿದ್ಯುತ್ ಬಳಸಿದರೆ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಹು-ಧಾ ಪಾಲಿಕೆಯ ವಲಯ 12ರ ಜಂಟಿ ಆಯುಕ್ತ ಶಂಕರ ಪಾಟೀಲ ಹೇಳಿದರು.

ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ `ಅವರ್ ಕ್ಯಾಂಪಸ್ ಗ್ರೀನ್ ಕ್ಯಾಂಪಸ್' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಬಳಕೆಯನ್ನು ಅತ್ಯಂತ ಮುತುವರ್ಜಿಯಿಂದ ಮಾಡಿ ಒಮ್ಮೆ ಬಳಕೆಯ (ಸಿಂಗಲ್ ಯೂಸೇಜ್) ಪ್ಲಾಸ್ಟಿಕ್‌ನ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು. ಕಸ ವಿಂಗಡಣೆ, ರಸ್ತೆ ಶುಚಿತ್ವ, ಸಸಿ ನೆಡುವಿಕೆ, ಸಾರ್ವಜನಿಕ ಉದ್ಯಾನ ನಿರ್ಮಾಣಕ್ಕೆ ಮಕ್ಕಳು ಹಾಗೂ ಪಾಲಕರು ಸಹಕರಿಸಬೇಕು ಎಂದರು.

ಶಾ0ತೇಶ ಎಜುಕೇಶನ್ ಸೊಸೈಟಿಯ ಚೇರ್ಮನ್ ಪ್ರೊ. ಪ್ರಹ್ಲಾದ ಹಂಚಿನಮನಿ, ಸಹ ಕಾರ್ಯದರ್ಶಿ ವರ್ಷಾ ಹಂಚಿನಮನಿ, ಪ್ರಾಚಾರ್ಯ ನವೀನ್ ಭಟ್, ಇತರರಿದ್ದರು. ಸ್ಮಿತಾ ಸದಾನಂದ ನಿರೂಪಿಸಿದರು.

ಪರಿಸರ ಇಂಜಿನಿಯರ್ ಸರೋಜಾ ಪೂಜಾರ ಮಕ್ಕಳಿಗೆ ರಂಜನೀಯ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಹಿರಿಯ ಆರೋಗ್ಯ ನಿರೀಕ್ಷಕ ಸಿದ್ಧಾರ್ಥ ನಿಡೋಣಿ, ಆರೋಗ್ಯ ನಿರೀಕ್ಷಕಿ ಪೂಜಾ ಇಚಂಗಿ, ಮೇಲ್ವಿಚಾರಕರಾದ ನೀಲಮ್ಮ ಅಂಗಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net