

ಮಡಿಕೇರಿ: ಮಡಿಕೇರಿ ಗಣಪತಿ ಕೊಡವ ಕೇರಿಯ ಒತ್ತೋರ್ಮೆ ಕೂಟ ಮಡಿಕೇರಿ ಕೊಡವ ಸಮಾಜ ಕಟ್ಟಡದಲ್ಲಿ ಸಂಭ್ರಮದಿಂದ ಜರುಗಿತು.
ಹಿರಿಯರಾದ ಚೆರುಮಂದಂಡ ಮಣಿ ಪೊನ್ನಪ್ಪರವರು ನೆಲ್ಲಕ್ಕಿಯಲ್ಲಿ ದೇವರನ್ನು ಪ್ರಾರ್ಥಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಗೆಬಗೆಯ ಕ್ರೀಡಾಕೂಟದಲ್ಲಿ ಸದಸ್ಯರು, ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.
ನಂತರ ಕೇರಿಯ ಅಧ್ಯಕ್ಷ ಬೊಳ್ಳಂಡ ಗಣೇಶ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಆಚರಣೆಗೆ ಮಹತ್ವ ನೀಡುವ ಮೂಲಕ ಕೊಡವ ಪದ್ಧತಿ, ಪರಂಪರೆಗಳನ್ನು ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.
ಕೇರಿಯ ಕಾರ್ಯದರ್ಶಿ ಮಂಡಿರ ಸದಾ ಮುದ್ದಪ್ಪ ವರದಿಯನ್ನು ವಾಚಿಸಿದರು. ವೇದಿಕೆಯಲ್ಲಿ ಕೋಟೆರ ಅಶೋಕ್, ಚಂಬಾಂಡ ಸುರೇಶ್, ಕೂಪದಿರ ಗಣೇಶ್, ತೇಲಪಂಡ ಸ್ವಾತಿ, ಚಂಬಂಡ ಸುನಿ ಮುತ್ತಪ್ಪ, ಬೊಳ್ಳದಂಡ ಸುಶೀಲ ಉಪಸ್ಥಿತರಿದ್ದರು.