ಒಟಿಪಿ ಯಾರೊಂದಿಗೂ ಹಂಚಿಕೊಳ್ಳದಿರಿ

11-12.MDL.02
Published on

ಮುದಗಲ್: ಜನರಲ್ಲಿ ಅರಿವು ಇದ್ದಾಗ ಅಪರಾಧಗಳನ್ನು ತಡೆಯಲು ಸಾಧ್ಯ ಎಂದು ಪಿಎಸ್‌ಐ ವೆಂಕಟೇಶ ಮಾಡಗೇರಿ ಹೇಳಿದರು.

ಅಪರಾದ ತಡೆ ಮಾಸಾಚರಣೆ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣ ಮತ್ತು ಕೆನರಾ ಬ್ಯಾಂಕ್‌ನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಿಸಬೇಕು. ಒಟಿಪಿ ನಂಬರ್ ಯಾರೊಂದಿಗೂ ಹಂಚಿಕೊಳ್ಳಬಾರದು. ಮೋಸದಿಂದ ಹಣ ಲಪಟಾಯಿಸುವವರ ಬಗ್ಗೆ ಗಮನ ಹರಿಸಬೇಕು. ರಸ್ತೆ ಸಂಚಾರದ ನಿಯಮಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅಪರಾಧಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಮೂಲಕ ಅಪರಾಧ ಕೃತ್ಯ ತಡೆಯಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.

ಕೆನರಾ ಬ್ಯಾಂಕ್ ಮ್ಯಾನೇಜರ ವಿಜಯ ಮಹಾಂತೇಶ ಮಾತನಾಡಿ, ಬ್ಯಾಂಕಿನವರು ಯಾವತ್ತೂ ದೂರವಾಣಿ ಕರೆ ಮಾಡುವುದಿಲ್ಲ ಹಾಗೂ ಒಟಿಪಿ ಕೇಳುವುದಿಲ್ಲ. ಬಯೋಮೆಟ್ರಿಕ್ ಸ್ಕ್ಯಾನ್ ಮಾಡಿದರೆ ಅಕೌಂಟಿನಲ್ಲಿ ಇರುವ ಹಣ ಕಡಿತವಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಯಾವುದೇ ಕಾರಣಕ್ಕೂ ಬಯೋಮೆಟ್ರಿಕ್ ಹಾಗೂ ಒಟಿಪಿ ಬಗ್ಗೆ ಮಾಹಿತಿ ಹಂಚಿಕೊಳ್ಳಬಾರದು ಎಂದು ಹೇಳಿದರು. ಎಎಸ್‌ಐ ವೆಂಕಟಪ್ಪ ನಾಯಕ್, ಪೊಲೀಸ್ ಸಿಬ್ಬಂದಿ ರಾಮಪ್ಪ, ಅಮರೇಶ, ವೆಂಕಟೇಶ, ಅನಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net