ತಿಪಟೂರು; ಬ್ರಿಟಿಷರ ಶೋಷಣೆ, ಗುಲಾಮಗಿರಿ, ದಬ್ಬಾಳಿಕೆ ವಿರುದ್ಧ ಸಿಡಿದೆದ್ದು ರಾಷ್ಟ್ರೀಯಮಟ್ಟದಲ್ಲಿ ಅಹಿಂಸಾತ್ಮಕ ಹೋರಾಟ ಕಟ್ಟಿದ ಇಬ್ಬರು ಮಹಾನ್ ಚೇತನಗಳನ್ನು ನಾಡಹಬ್ಬ ದಸರಾ ದಿನದಂದು ಸ್ಮರಿಸುವುದು ನಮ್ಮೆಲ್ಲರ ಸುಧೈವ ಎಂದು ಉಪನ್ಯಾಸಕ ಕೆ.ಎನ್.ರೇಣುಕಯ್ಯ ಧನ್ಯತೆ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಮತ್ತು ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತವನ್ನು ಬಿಡುಗಡೆಗೊಳಿಸಿ, ಪ್ರಜೆಗಳನ್ನು ಸರ್ವಸ್ವತಂತ್ರರನ್ನಾಗಿಸಿದ ಮಹಾನ್ ಸ್ವಾತಂತ್ರ$್ಯ ಹೋರಾಟಗಾರರಲ್ಲಿ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸಿ ಪ್ರಮುಖರು. ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆಗಳನ್ನು ಅಸವಾಗಿಸಿಕೊಂಡು ಉಪ್ಪಿನ ಸತ್ಯಾಗ್ರಹ, ಸ್ವದೇಶಿ ವಸ್ತುಗಳ ಬಳಕೆಯ ಜಾಗೃತಿ ಮೂಡಿಸಿ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಗಟ್ಟಿಧ್ವನಿಯಲ್ಲಿ ಪ್ರತಿಭಟಿಸಿದರು. ಜನರ ಅಸಹಾಯಕ ಸ್ಥಿತಿ ಹೋಗಲಾಡಿಸಲು ಅವರಲ್ಲಿ ಆತ್ಮವಿಶ್ವಾಸ, ದೇಶಾಭಿಮಾನ, ದೃಢ ಸಂಕಲ್ಪ ಮೂಡಿಸುವಲ್ಲಿ ಯಶಸ್ವಿಯಾದ ಗಾಂಧೀಜಿ ಅವರು ಮಹಾತ್ಮ ಎಂಬ ಬಿರುದು ಗಳಿಸಿದರೆ ಶಾಸಿ ಅವರು ಬಡತನದಲ್ಲೇ ಹುಟ್ಟಿ, ಬೆಳೆದು, ಸರಳತೆ ಮೈಗೂಡಿಸಿಕೊಂಡು, ಪ್ರಧಾನ ಮಂತ್ರಿಯಾಗಿ ಪ್ರಾಮಾಣಿಕ, ರಾಜಕೀಯ ಮೌಲ್ಯ, ನೈತಿಕತೆಗಳನ್ನು ರಾಜಕಾರಣಿಗಳು ಬೆಳೆಸಿಕೊಳ್ಳುವಂತೆ ಮಾಡಿದರು ಎಂದು ಬಣ್ಣಿಸಿದರು.
ತಾಪಂ ಇಒ ಎಚ್.ಎಂ.ಸುದರ್ಶನ್ ಮಾತನಾಡಿ, ಭಾರತದ ಸ್ವಾತಂತ್ರ$್ಯ ಹೋರಾಟದಲ್ಲಿ ಕಂಡ ಎರಡು ಅನ್ಯರ್ ರತ್ನಗಳೇ ಗಾಂಧೀಜಿ ಮತ್ತು ಶಾಸಿಜಿ. ಸನಾತನ ಸಂಸತಿಯ ಸರ್ವಧರ್ಮ, ಜನಾಂಗ, ಭಾಷೆಗಳ ಸಾಮರಸ್ಯಕ್ಕಾಗಿ ಹೋರಾಡಿ, ಉನ್ನತ ಆದರ್ಶಗಳೊಂದಿಗೆ ದೃಢ ನಿಷ್ಠೆ, ಪ್ರಾಮಾಣಿಕತೆ ಮತ್ತು ಸ್ವ&ಸಾಮರ್ಥ್ಯವುಳ್ಳ ವ್ಯಕ್ತಿಗಳನ್ನು ಸಜ್ಜುಗೊಳಿಸಿ, ದೇಶವು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದ ಮಹಾತ್ಮರು ಎಂದರು.
ವಿವಿಧ ಶಾಲಾ ಮಕ್ಕಳು ಭಗವದ್ಗೀತೆ, ಬೈಬಲ್ ಮತ್ತು ಕುರಾನ್ ಪಠಿಸಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎನ್.ಕಾಂತರಾಜು. ಬಿಇಒ ತಾರಾಮಣಿ, ಅಕ್ಷರ ದಾಸೋಹ ಅಧಿಕಾರಿ ಶಿವಶಂಕರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ, ವಾಣಿಜ್ಯ ತೆರಿಗೆ ಇಲಾಖೆಯ ಶ್ವೇತಾ, ಬಿಆರ್ಸಿ ದಣಾಮೂರ್ತಿ, ದೈಹಿಕ ಶಿಕ್ಷಣಾಧಿಕಾರಿ ಶಮಂತ್, ತಾಪಂನ ಹೇಮಂತ್ ಇದ್ದರು.
ಆಯಕಟ್ಟಿನ ಜಾಗದಲ್ಲಿರುವ ಮಹಾತ್ಮಗಾಂದೀಜಿ ತಂಗಿದ್ದ ಮನೆಯನ್ನು ಉನ್ನತಿಕರಿಸಿ ಸ್ಮಾರಕವಾಗಿ ಮಾಡಲಾಗುವುದು ಮತ್ತು ಇಲ್ಲಿ ಬಸವ, ಮತ್ತು ಡಾ. ಬಿ.ಆರ್.ಅಂಬೇಡ್ಕರ್ರ ಪ್ರತಿಮೆ ಸ್ಥಾಪಿಸಲಾಗುವುದು.
- ಕೆ.ಷಡಕ್ಷರಿ
ಶಾಸಕರು, ತಿಪಟೂರು