

ತರೀಕೆರೆ: ರೋಟರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ರಾಜಕೀಯ ಮತ್ತು ವೈಯಕ್ತಿಕ ಪ್ರಗತಿಗೆ ಪೂರಕವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್‌ನಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ರೋಟರಿ ಅಕಾಡೆಮಿ ಅತ್ಯುನ್ನತ ನಾಯಕತ್ವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರೋಟರಿ ಸಂಸ್ಥೆ ಹಲವು ಜನಮುಖಿ ಕಾರ್ಯಕ್ರಮ ಆಯೋಜಿಸಿ ವಿಶ್ವಾಸಗಳಿಸಿದೆ. ಪೋಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ರೋಟರಿ ಸಂಸ್ಥೆ ಚಟುವಟಿಕೆಯಲ್ಲಿ ಸಕ್ರಿಯರಾಗುವುದರಿಂದ ನಾಯಕತ್ವ ಗುಣ ಬೆಳೆಯುವುದಲ್ಲದೇ, ಮಾನವೀಯ ಮೌಲ್ಯ ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಎಂದರು.
ಶಿವಮೊಗ್ಗ ಡಯಟ್ ಉಪನ್ಯಾಸಕ ಜಿ.ವಿ.ಹರಿಪ್ರಸಾದ್ ಶಾಂತಿ ಮತ್ತು ಸೌರ್ಹಾದತೆ ಕುರಿತು, ಕೋಲಾರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಸಯ್ಯದ್ ಅನ್ಸರ್ ಖಲೀಂ ನಾಯಕತ್ವ ಕುರಿತು ಮಾತನಾಡಿದರು. ಹಾಸನ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರಿನಿಂದ ಭಾಗವಹಿಸಿದ್ದ ಎಲ್ಲಾ ಕ್ಲಬ್‌ಗಳಿಗೆ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೋಟರಿ ಸಂಸ್ಥೆ ಪ್ರಮುಖರಾದ ಪಿ.ಶಶಿಕುಮಾರ್, ಪ್ರದೀಪ್‌ಕುಮಾರ್, ಡಾ.ಜಿ.ಸಿ.ಶರತ್, ಕೆ.ಎಲ್.ನಾಗರಾಜ್, ಟಿ.ಆರ್.ಶ್ರೀಧರ್, ಪಿ.ಬಿ.ಗೋರ್ವಧನ್, ಬಿ.ವಿ.ದಿನೇಶ್ ಕುಮಾರ್ ಮತ್ತಿತರರಿದ್ದರು.