ಓಶೋ ಧ್ಯಾನ ಶಿಬಿರ 12ರಿಂದ

Screenshot_20231007-202435_1.jpg
Published on

ಹುಬ್ಬಳ್ಳಿ: ತಾಲೂಕಿನ ವರೂರ ಸಮೀಪದ ಸೂರಶೆಟ್ಟಿಕೊಪ್ಪ ಗ್ರಾಮ ಚೇತನದಲ್ಲಿ ಓಶೋ ಧ್ಯಾನ ಮಹೋತ್ಸವ ವಸತಿಯುತ ಶಿಬಿರವನ್ನು ಅಕ್ಟೋಬರ್ 12ರಿಂದ ಮೂರು ದಿನಗಳವರೆಗೆ ಏರ್ಪಡಿಸಲಾಗಿದೆ.

ಡೈನಾಮಿಕ್, ಕುಂಡಲಿನಿ, ನಾದಬ್ರಹ್ಮ, ಸರ್ವಸಾರ, ಗೌರಿಶಂಕರ, ನಟರಾಜ ಮುಂತಾದ ಧ್ಯಾನ ವಿಧಾನಗಳನ್ನು ಶಿಬಿರದಲ್ಲಿ ಕಲಿಸಲಾಗುವುದು. ಧ್ಯಾನದಿಂದ ಮನುಷ್ಯನ ಶೇ. 90ರಷ್ಟು ಮನೋದೈಹಿಕ ಕಾಯಿಲೆಗಳಿಗೆ ಪರಿಹಾರ ಸಿಗಲಿದೆ.

ಆಸಕ್ತರು, ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕ ಜಯದೇವ ಪೂಜಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net