

ಹುಬ್ಬಳ್ಳಿ: ಮೂರು ದಿನಗಳ ವಸತಿಯುತ ಓಶೋ ಧ್ಯಾನ ಶಿಬಿರವನ್ನು ಸೆ. 7ರಿಂದ 10ರ ವರೆಗೆ ಕಲಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಗ್ರಾಮ ಚೇತನದಲ್ಲಿ ಏರ್ಪಡಿಸಲಾಗಿದೆ.
ಭ್ರಮೆ, ಭಯ, ಭೂತಕಾಲದ ನೋವಿನಿಂದ ಮುಕ್ತಿ, ಒತ್ತಡ, ಆತಂಕ, ಖಿನ್ನತೆ, ಸಕ್ಕರೆ ಕಾಯಿಲೆ, ಬಿಪಿ, ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಹೊಂದಲು ಶಿಬಿರ ನೆರವಾಗಲಿದೆ.
ನಗು, ಹಾಡು, ನರ್ತನ, ಧ್ಯಾನ, ಮೌನ, ಪ್ರಾರ್ಥನೆ, ಪ್ರಾಣಾಯಾಮ ಕಲಿಸಿಕೊಡಲಾಗುವುದು ಎಂದು ಶಿಬಿರದ ಆಯೋಜಕ ಜಯದೇವ ಪೂಜಾರ ತಿಳಿಸಿದ್ದಾರೆ.