ಅವಿಭಜಿತ ದ.ಕ. ಅಭಿವೃದ್ಧಿಗೆ ಆಸ್ಕರ್ ದೂರದೃಷ್ಟಿ ಕಾರಣ: ಪ್ರತಾಪಚಂದ್ರ ಶೆಟ್ಟಿ

udp-15-congress
Published on

ಉಡುಪಿ: ಅಜಾತಶತ್ರು  ಆಸ್ಕರ್ ಅವರ ದೂರದೃಷ್ಟಿಯಿಂದ  ಉಡುಪಿ  ಹಾಗೂ  ಮಂಗಳೂರು  ಅಭಿವೃದ್ಧಿ ಪಥದಲ್ಲಿ ಸಾಗಿದ್ದು, ತಾನು ಮಾಡಿದ  ಅಭಿವೃದ್ದಿ ಕೆಲಸಗಳನ್ನು  ಪ್ರಚಾರಕ್ಕೆ  ಬಳಸಿಕೊಳ್ಳದೆ  ಇತರರಿಗೆ  ಮಾದರಿಯಾಗಿದ್ದರು  ಎಂದು   ಮಾಜಿ  ವಿಧಾನ ಪರಿಷತ್  ಸಭಾಪತಿ  ಪ್ರತಾಪ್ ಚಂದ್ರ  ಶೆಟ್ಟಿ ಹೇಳಿದರು.

ಶುಕ್ರವಾರ ಜಿಲ್ಲಾ  ಕಾಂಗ್ರೆಸ್  ಭವನದಲ್ಲಿ ದಿ. ಆಸ್ಕರ್ ೆರ್ನಾಂಡಿಸ್ ಎರಡನೇ   ಪುಣ್ಯತಿಥಿ  ಪ್ರಯುಕ್ತ  ಪುತ್ಥಳಿಗೆ  ಪುಷ್ಪನಮನ  ಸಲ್ಲಿಸಿ ಮಾತನಾಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ  ಮಾತನಾಡಿ, ಕಾರ್ಯಕರ್ತರು ಆಸ್ಕರ್ ಕಾರ್ಯವೈಖರಿ  ಸದಾ ನೆನಪಿಸಿಕೊಳ್ಳಬೇಕು. ಅವರ ಪ್ರಯತ್ನದಿಂದ  ಜಿಲ್ಲಾ  ಕಾಂಗ್ರೆಸ್  ಭವನ  ಸಾಧ್ಯವಾಗಿದೆ. ಜಿಲ್ಲೆಯಲ್ಲಿ  ಪಕ್ಷ  ಬೆಳೆಯಲು ಈ  ಕಟ್ಟಡ  ಪೂರಕ  ವಾತಾವರಣ  ಕಲ್ಪಿಸಿದೆ  ಎಂದರು.

ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ಎಮ್.ಎ.ಗಪೂರ್, ಜ್ಯೋತಿ ಹೆಬ್ಬಾರ್, ದಿನೇಶ್  ಪುತ್ರನ್, ವೆರೋನಿಕಾ  ಕರ್ನೇಲಿಯೋ,  ಗೀತಾ  ವಾಗ್ಳೆ, ಹರೀಶ್  ಕಿಣಿ,  ಉದ್ಯಾವರ  ನಾಗೇಶ್  ಕುಮಾರ್,  ಭುಜಂಗ  ಶೆಟ್ಟಿ , ದಿನಕರ  ಹೇರೂರು, ಕೃಷ್ಣಮೂರ್ತಿ   ಆಚಾರ್ಯ, ಮಹಾಬಲ  ಕುಂದರ್, ಆನಂದ  ಪೂಜಾರಿ, ರೋಶನ್  ಶೆಟ್ಟಿ   ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net