

ಹುಬ್ಬಳ್ಳಿ: ಸ್ಥಳಿಯ ಸರಾಫ್ ಗಟ್ಟಿಯಲ್ಲಿರುವ ಚಿನ್ನಾಭರಣ ವ್ಯಾಪಾರಸ್ಥರಾದ ಕರಿ ಆ್ಯಂಡ್ ಸನ್ಸ್ ಮಳಿಗೆಯವರು ಗೋಕುಲ ರಸ್ತೆಯ ಡೆನಿಸನ್ಸ್ ಹೋಟೆಲ್ನಲ್ಲಿ ಏರ್ಪಡಿಸಿರುವ ಆಭರಣಗಳ ಎರಡು ದಿನಗಳ ಪ್ರದರ್ಶನವನ್ನು ಖ್ಯಾತ ನೇತ್ರ ತಜ್ಞ ಡಾ. ಎಂ.ಎಂ. ಜೋಶಿ ಅವರು ಶನಿವಾರ ಉದ್ಘಾಟಿಸಿದರು.
ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ನೂರು ವರ್ಷಗಳನ್ನು ಪೂರೈಸಿರುವ ಅತ್ಯಂತ ಹಳೆಯ ಮತ್ತು ನಂಬಿಕೆಗೆ ಹೆಸರಾದ ಕರಿ ಆ್ಯಂಡ್ ಸನ್ಸ್ ನವರು ಮೊದಲ ಬಾರಿಗೆ ಇಂತಹ ಆಭರಣ ಪ್ರದರ್ಶನ ಏರ್ಪಡಿಸಿದ್ದಾರೆ. ಮಹಾನಗರದ ಜನತೆ ಇದರ ಲಾಭ ಪಡೆಯಬೇಕೆಂದು ಡಾ. ಜೋಶಿ ಅವರು ಹೇಳಿದರು.
ಮಳಿಗೆ ಮಾಲಿಕ ಶ್ರೀಕಾಂತ ಕರಿ, ಸುಮೇಶ ವಾದ್ರಾ, ಚೇತನ ಮೆಹತಾ, ಸುರೇಶ ಘಾನಾ, ಒ.ವಿ. ದಿವಾಕರ, ನಿಖಿಲ್ ಕರಿ, ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.
ಪ್ರದರ್ಶನವು ಭಾನುವಾರ ಬೆಳಗ್ಗೆ 10.30ರಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರಲಿದೆ. ಸರಿಸಾಟಿಯಿಲ್ಲದ ಮತ್ತು ಅದ್ಬುತ ವಿನ್ಯಾಸದ ಆಭರಣಗಳು ಪ್ರದರ್ಶನದಲ್ಲಿ ಇದ್ದು ಗ್ರಾಹಕರಿಗೆ ಮೋಡಿ ಮಾಡಲಿವೆ ಎಂದು ಸಂಟಕರು ತಿಳಿಸಿದ್ದಾರೆ.