

ಜೈಲುವಾಸಿಗಳಿಗೆ ರಚನಾತ್ಮಕ ಕೆಲಸಗಳನ್ನು ಒದಗಿಸುವ ಕಾರ್ಯಕ್ರಮದ ಭಾಗವಾಗಿ ಅಲಂಕಾರಿಕ ಗಿಡಗಳ ಪೋಷಣೆ ಹಾಗೂ ಮಾರಾಟ ವ್ಯವಸ್ಥೆ ಆರಂಭಿಸಲಾಗಿದೆ. ಗಿಡಗಳೇನೋ ಸಿದ್ಧವಾಗಿದೆ. ಮಾರುಕಟ್ಟೆ ಒದಗಿಸುವ ಪ್ರಯತ್ನ ನಡೆಯುತ್ತವೆ. ಗಿಡಗಳನ್ನು ಪ್ಲಾಸ್ಟಿಕ್ ತೊಟ್ಟೆಗಳ ಬದಲು ಮಣ್ಣಿನ ಕುಂಡಗಳಲ್ಲಿ ಒದಗಿಸಿದರೆ ಗ್ರಾಹಕರಿಗೆ ಕೊಂಡೊಯ್ಯಲು ಮತ್ತು ಮನೆಗಳಲ್ಲಿ ಬೆಳೆಸಲು ಅನುಕೂಲ ಎಂಬ ಅಭಿಪ್ರಾಯವಿದೆ. ಪ್ರಯತ್ನ ನಡೆಯುತ್ತಿದೆ. ಗಿಡ ಮಾರಾಟಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ಅಗತ್ಯ ಇರುವವರು ಮಂಗಳೂರು ಜೈಲ್ ರೋಡ್ ನಲ್ಲಿರುವ ಜೈಲಿನ ಮುಂಭಾಗದಲ್ಲಿರುವ ಸಿಬ್ಬಂದಿಯನ್ನು ಸಂಪರ್ಕಿಸಬಹುದು.