

ಅರಸೀಕೆರೆ ಗ್ರಾಮಾಂತರ : ತಾಲೂಕಿನ ಕಸಬಾ ಹೋಬಳಿಯ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ತಪಸ್ವಿ ಶ್ರೀ ಶಿವಲಿಂಗಜ್ಜಯ್ಯ ಸ್ಥಾಪಿತ ಮಾಡಾಳು ಮೂಲ ಸ್ವರ್ಣ ಗೌರಿ ಅಮ್ಮನವರ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಾವಿರಾರು ಭಕ್ತರು ನೂತನ ದೇವಾಲಯ ನಿರ್ಮಾಣ ಸ್ಥಳದಲ್ಲಿ ಅಮ್ಮನ ದರ್ಶನ ಪಡೆದು ಹರ್ಷೋದ್ಘಾರ ಮಾಡುತ್ತಿದ್ದಾರೆ. ತಪಸ್ವಿ ಶಿವಲಿಂಗಜ್ಜಯ್ಯ ಅವರು ಸುಮಾರು 170 ವರ್ಷಗಳ ಹಿಂದೆ ನೀಡಿದ್ದ ಮೂಗೂತಿ ಧರಿಸುತ್ತಿರುವ ಅಮ್ಮನವರ ದರ್ಶನದಿಂದ ಕಷ್ಟ ಕಾರ್ಪಣ್ಯಗಳು ಬಗೆಹರಿಯುತ್ತದೆ ಎಂದು ಭಕ್ತ ಕೋಟಿಯ ನಂಬಿಕೆಯಾಗಿದೆ.
ಶ್ರೀ ಮಠದ ಪದ್ಧತಿಯಂತೇ ಮೂಲ ಸ್ವರ್ಣ ಗೌರಿ ಅಮ್ಮನವರಿಗೆ ಪ್ರತಿ ವರ್ಷ ನೀಡುವ ಮೂಗುತಿಯನ್ನು ಈ ಬಾರಿ ಶ್ರೀಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು ಅವರು ಅಮ್ಮನವರಿಗೆ ಧಾರಣೆ ಮಾಡಿದ್ದು ವಿಶೇಷ.