ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಸೆ.16ರಂದು ಮಧ್ಯಾಹ್ನ 3 ಗಂಟೆಗೆ ದಿ.ಜಯಶ್ರೀ ಗುತ್ತಲ ದತ್ತಿ ಕಾರ್ಯಕ್ರಮದ ಅಂಗವಾಗಿ ಮಹಿಳಾ ಮಂಡಳ ಹಾಗೂ ಮಹಿಳಾ ಭಜನಾ ಮಂಡಳಗಳಿಗೆ ಜಾನಪದ ಸಾಹಿತ್ಯ ಸಂಸ್ಕೃತಿಯ ಮೂಲ ಜಾನಪದ ಸಂಪ್ರದಾಯ ಹಾಡುಗಳ ಸ್ಪರ್ಧೆಯನ್ನು ಸಂಘದ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಏರ್ಪಡಿಸಿದೆ.
ಅದೇ ದಿನ ಸಂಜೆ ಬಹುಮಾನ ಹಾಗೂ ಪ್ರಥಮ ಸ್ಥಾನ ಪಡೆದ ಮಂಡಳಿಗೆ 'ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ 2025' ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಾನಪದ ಸ್ಪರ್ಧೆಯ ಹಾಡುಗಳನ್ನು ರೂಪಕದೊಂದಿಗೆ ಕೂಡ ಪ್ರಸ್ತುತಪಡಿಸಬಹುದು.
ಕುಟ್ಟುವ, ಬೀಸುವ ಹಾಗೂ ಸುಗ್ಗಿಯ ಹಾಡುಗಳು, ಕೋಲಾಟ ಪದ, ಗೀಗೀ ಪದ ಹಾಗೂ ಲಾವಣಿ ಪದಗಳು ಹಾಗೂ ಜೋಗುಳ ಪದಗಳು, ಹರಿದಾಸರು ಮತ್ತು ಹರಿದಾಸ ಮಹಿಳೆಯರ ಹಾಗೂ ವಚನಕಾರರಲ್ಲಿ ಒಬ್ಬರ ಹಾಡುಗಳ ಜಾನಪದಗಳು, ದೇವರು ಹಾಗೂ ದೇವತೆಗಳ ಸ್ತುತಿರೂಪದ ಹಾಡುಗಳನ್ನು ಹಾಡಬಹುದು ಎಂದು ಪ್ರಕಟಣೆ ತಿಳಿಸಿದೆ.