ಮೈಸೂರು: ಕೃಷಿಕ್ ಸರ್ವೋದಯ ಫೌಂಡೇಶನ್, ಕೆಎಸ್‌ಎಫ್ ಅಕಾಡೆಮಿಯಿಂದ ಜು.12ರಂದು ಒಂದು ದಿನದ ಬ್ಯಾಂಕ್ ಪರೀಕ್ಷಾ ತರಬೇತಿಗೆ ಉಚಿತ ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಬ್ಯಾಂಕ್, ಸರ್ಕಾರಿ ನೌಕರಿ ಪರೀಕ್ಷೆಗಳ ತಯಾರಿಕೆ ವಿಧಾನ, ಪಠ್ಯಕ್ರಮ, ಯಶಸ್ಸುಗಳ ಹಂತ, ವ್ಯವಹಾರಿಕ ಸಲಹೆಗಳ ಕುರಿತು ವಿಷಯ ತಜ್ಞರು ತಿಳಿಸಿಕೊಡಲಿದ್ದಾರೆ. ಆಸಕ್ತ ಅಭ್ಯರ್ಥಿಗಳು ವಿಜಯನಗರದ ಜನರಲ್ ತಿಮ್ಮಯ್ಯ ರಸ್ತೆ (ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಬಳಿ) ಕೆಎಸ್‌ಎಫ್ ಕಚೇರಿಯಲ್ಲಿ ಪೂರ್ವ ನೋಂದಣಿ ಮಾಡಿಕೊಳ್ಳುವಂತೆ ಕಾರ್ಯದರ್ಶಿ ಎಚ್.ಕಿಶೋರ್‌ಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.