

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಎಸ್.ಆರ್.ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿ, ಪಾಲಕರಿಗೆ ಓರಿಯಂಟೇಷನ್ ಕಾರ್ಯಕ್ರಮ ಗುರುವಾರ ನಡೆಯಿತು.
ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಧಾಕರ್ ಕೆ.ಜಿ. ಉದ್ಘಾಟಿಸಿ ಮಾತನಾಡಿ, ಯಶಸ್ಸು ಎಂಬುದು ಕೇವಲ ಅದೃಷ್ಟವಲ್ಲ. ಪರಿಶ್ರಮ, ಸತತ ಪ್ರಯತ್ನದಿಂದ ಮಾತ್ರವೇ ಯಶಸ್ಸು ದೊರೆಯುತ್ತದೆ. ಬದುಕಿನಲ್ಲಿ ಶಿಕ್ಷಣದ ಮಹತ್ವ ತಿಳಿದುಕೊಂಡು ಓದಿ, ಪಾಲಕರ ಕನಸನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಬೇಕು ಎಂದರು.
ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಮಾತನಾಡಿ, ಕಲಿಯುವಾಗ ಮನಸಿಟ್ಟು ಕಲಿತರೆ ಗುರಿ ತಲುಪಲು ಸಾಧ್ಯ ಎಂದು ಮಾರ್ಗದರ್ಶನ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಸ್ವಪ್ನಾ ಎನ್.ಶೆಟ್ಟಿ ಮಾತನಾಡಿದರು. ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ಪ್ರಶಾಂತ್ ಉಪಸ್ಥಿತರಿದ್ದರು. ಉಪನ್ಯಾಸಕಿ ಗೀತಾ ಪ್ರಭು ನಿರೂಪಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಪ್ರೀತಿ ಹೆಗ್ಡೆ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಶುಭಲಕ್ಷ್ಮೀ ವಂದಿಸಿದರು.