ಸೆ.23ರಂದು ಪಿಇಎಸ್ ಕಾಲೇಜಿನಲ್ಲಿ ಓರಿಯಂಟೇಷನ್ ಪ್ರೋಗ್ರಾಂ: ಇಸ್ರೋದ ಮೂವರು ವಿಜ್ಞಾನಿಗಳಿಂದ ಪ್ರಧಾನ ಭಾಷಣ

Orientation Program at PES College on 23rd September
Published on

ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗಾಗಿ ಸೆ.23ರಂದು ಪರಿಚಯಾತ್ಮಕ ಕಾರ್ಯಕ್ರಮ(ಓರಿಯಂಟೇಷನ್ ಪ್ರೋಗ್ರಾಂ) ಆಯೋಜಿಸಲಾಗಿದೆ. ವಿಶೇಷವಾಗಿ ಚಂದ್ರಯಾನ-3 ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳೂ ಆದ ಮೂವರು ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ ತಿಳಿಸಿದರು.

ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಅಂದು ಬೆಳಗ್ಗೆ 11ಗಂಟೆಗೆ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಕಾರ್ಯಕ್ರಮ ಉದ್ಘಾಟಿಸುವರು. ಇಸ್ರೋ ವಿಜ್ಞಾನಿಗಳಾದ ಪಿ.ವಾಸುದೇವರಾವ್, ಕಮ್ರಾನ್ ಅಹಮ್ಮದ್, ಟಿ.ರವಿ, ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆದ ಕಾರ್ಪೋರೇಟ್ ಲೀಡರ್ ಹಾಗೂ ಇನ್ವೆಸ್ಟರ್ ಇಂಡಿಯಾದ ಸೀರಿಯಲ್ ಎಂಟ್ರಪ್ರೂೃನರ್ ಸಮರ್ಥ ನಾಗಭೂಷಣಂ ಪ್ರಧಾನ ಭಾಷಣ ಮಾಡುವರು. ಇದೇ ವೇಳೆ ನಾಲ್ವರನ್ನು ಗೌರವಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪ ಪ್ರಾಂಶುಪಾಲ ಡಾ.ಎಸ್.ವಿನಯ್ ಭಾಗವಹಿಸಲಿದ್ದಾರೆ. ಪಿಇಎಸ್ ತಾಂತ್ರಿಕ ಕಾಲೇಜು ತಾಂತ್ರಿಕ ಮತ್ತು ಆಡಳಿತ ಅಧ್ಯಯನ ವಿಷಯಗಳಲ್ಲಿ ಗ್ರಾಮೀಣ, ನಗರ ಪ್ರದೇಶಗಳಿಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಔದ್ಯೋಗಿಕ, ಉದ್ಯಮಶೀಲತೆ ತರಬೇತಿ ನೀಡುತ್ತಿದೆ. 2023ರ ತಾಂತ್ರಿಕ ಶಿಕ್ಷಣದಲ್ಲಿ ಭಾರತೀಯ ಶ್ರೇಯಾಂಕದ ಪಟ್ಟಿಯಲ್ಲಿ 151-200ನೇ ಬ್ಯಾಂಡ್ ಪಡೆದಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 11 ಸ್ನಾತಕ(ಬಿಇ), 6 ಸ್ನಾತಕೋತ್ತರ(ಎಂ.ಟೆಕ್, ಎಂಬಿಎ, ಎಂಸಿಎ) ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಕಾಲೇಜಿನ ಡೀನ್(ಶೈಕ್ಷಣಿಕ) ಡಾ.ಬಿ.ದಿನೇಶ್‌ಪ್ರಭು, ಉಪ ಡೀನ್(ಪರೀಕ್ಷೆ) ಡಾ.ಡಿ.ಆರ್.ಉಮೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ಜೆ.ಮಹೇಂದ್ರಬಾಬು, ಉಪ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net