

ಹುಬ್ಬಳ್ಳಿ: ಇಲ್ಲಿಯ ಅಲೆನ್ ಸಂಸ್ಥೆಯ ವತಿಯಿಂದ ಮೆಗಾ ಓರಿಯಂಟೇಶನ್ ಹಾಗೂ ಟಾಪರ್ಸ್ ಟಾಕ್ ಕಾರ್ಯಕ್ರಮವನ್ನು ನಗರದ ಗೋಕುಲ ರಸ್ತೆಯಲ್ಲಿರುವ ನಾನಕಿ ಸಮುದಾಯ ಭವನದಲ್ಲಿ ಏ. 13ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.
ಅಲೆನ್ ಸಂಸ್ಥೆಯ ಪರಿಣಿತರು ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಸಂವಾದ ನಡೆಸಿಕೊಡುವರು. ಅಲೆನ್ ದಕ್ಷಿಣ ಭಾರತದ ವಲಯ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ಮಹೇಶ ಯಾದವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.