ಸಕ್ರಿ ಕಾಲೇಜಿನಲ್ಲಿ ಒರಿಯಂಟೇಶನ್

IMG_20241009_204815_52.jpg
Published on

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಒರಿಯೆಂಟೇಶನ್ ಕಾರ್ಯಕ್ರಮ ಬುಧವಾರ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಹೈಕೋರ್ಟ್ ವಕೀಲ ವಿಶ್ವನಾಥ ಬಿಚಗತ್ತಿ ಮಾತನಾಡಿ, ನಾಗರಿಕ ಜಗತ್ತಿನಲ್ಲಿ ಕಾನೂನು ಬಿಟ್ಟು ಬದುಕಲು ಸಾಧ್ಯವಿಲ್ಲ. ಕಾನೂನು ಅಧ್ಯಯನ ಎಂಬುದು
ಸಮುದ್ರವಿದ್ದಂತೆ, ಎಷ್ಟು ಓದಿದರೂ ಕಡಿಮೆಯೇ. ವೃತ್ತಿ ಆರಂಭಿಸಿದ ನಂತರವೂ ಹೆಚ್ಚಿನ ಜ್ಞಾನ, ಸಾಮಾಜಿಕ ಕಾಳಜಿ, ಸಾಮಾಜಿಕ ಬದ್ಧತೆಯಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ರೂಪಾ ಇಂಗಳಹಳ್ಳಿ, ವಿದ್ಯಾರ್ಥಿ ಜೀವನದಲ್ಲಿ ಸಮಯವನ್ನು ವ್ಯಯ ಮಾಡದೇ ಸತತವಾಗಿ ಓದಿನಲ್ಲಿ ತೊಡಗಿಸಿಕೊಂಡು ಉತ್ತಮ ವಕೀಲರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಪ್ರೊ. ಬಾಬುಲಾಲ ದರಗದ, ಪ್ರೊ. ದೀಪಾ ಪಾಟೀಲ, ಪ್ರೊ. ರ್ಪೂಣಿಮಾ ರ್ಕುಡಿಕೆರಿ, ಪ್ರೊ. ವಿದ್ಯಾ ಮುರಶಿಲಿನ್, ಸುರೇಶ ಲಿಂಬಿಕಾಯಿ, ಸತೀಶ ಸಿ.ವಿ., ಸುರೇಶ ಲಮಾಣಿ, ಭರತ ಬಿ. ಇತರರು ಭಾಗವಹಿಸಿದ್ದರು.

ನಿವೇದಿತಾ ಸ್ವಾಗತಿಸಿದರು. ಶಿಲ್ಪಾ ಎಲಿಗಾರ ಪ್ರಾರ್ಥನೆ ಹಾಡಿದರು. ಬಾಲಕೃಷ್ಣ ಕಟ್ಟಾ ಪರಿಚಯಿಸಿದರು. ಭೂಮಿಕಾ ನಿರೂಪಿಸಿದರು. ಲಕ್ಷಿ$್ಮ ಶಾಡಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net