ಸೋಸಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಆದ್ಯತೆ

18 july tnp 03
ತಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಶ್ರೀ ಹೊನ್ನಾದೇವಿ ದೇವಾಲಯ ಆವರಣದಲ್ಲಿ ಶುಕ್ರವಾರ ಸ್ನೇಹ ಕಲಾತಂಡಕ್ಕೆ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಉಪನ್ಯಾಸಕ ಎನ್.ಜವರಯ್ಯ ಅವರನ್ನು ಸನ್ಮಾನಿಸಲಾಯಿತು. ಎಂ. ನಾಗರಾಜು, ಎಸ್.ಎಂ. ಚಿನ್ನಸ್ವಾಮಿ, ಬೇಕರಿ ಸೋಮಣ್ಣ, ಎ.ನಾಗರಾಜು ಇತರರು ಇದ್ದರು.
Published on

ತಿ.ನರಸೀಪುರ: ಹುಟ್ಟೂರಿನಲ್ಲಿ ಜನರ ಸೇವೆಯನ್ನು ಮಾಡಲು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ನೇಹ ಕಲಾ ತಂಡದ ಸಂಘಟನೆಯಲ್ಲಿ ಕಾರ್ಯಾಧ್ಯಕ್ಷ ಹುದ್ದೆಯನ್ನು ಕಲ್ಪಿಸಿಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿ.ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎನ್.ಜವರಯ್ಯ ಹೇಳಿದರು.

ತಾಲೂಕಿನ ಸೋಸಲೆ ಗ್ರಾಮದ ಶ್ರೀ ಹೊನ್ನಾದೇವಿ ದೇವಾಲಯ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ನೇಹ ಕಲಾ ತಂಡದ ಸಭೆಯಲ್ಲಿ ಸಂಘಟನೆಗೆ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನೇಮಕಾತಿ ಪತ್ರವನ್ನು ಸ್ವೀಕರಿಸಿ ಮಾತನಾಡಿ, ಗ್ರಾಮದಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಲು ಪದಾಧಿಕಾರಿಗಳ ಜತೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಸೋಸಲೆ ಗ್ರಾಮ ಪ್ರಮುಖ ಧಾರ್ಮಿಕ ದೇವಾಲಯಗಳ ನೆಲೆಬೀಡಾಗಿದ್ದು, ವ್ಯಾಸರಾಜರ ಮಠವನ್ನು ಹೊಂದಿರುವುದು ಗ್ರಾಮದ ಭವ್ಯ ಪರಂಪರೆಯಾಗಿದೆ. ಗ್ರಾಮದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಗಳನ್ನು ಹಲವರು ನಡೆಸಿಕೊಂಡು ಬರುತ್ತಿದ್ದಾರೆ. ಅವರೊಡನೆ ನಾನೂ ಕಾರ್ಯಭಾರಿಯಾಗಿ ಪಾಲ್ಗೊಳ್ಳುತ್ತೇನೆ. ಸ್ನೇಹ ಕಲಾ ತಂಡವನ್ನು ಎಲ್ಲರೊಡನೆ ಉತ್ತಮವಾಗಿ ಕಟ್ಟುತ್ತೇನೆ ಎಂದು ಹೇಳಿದರು.

ಶ್ರೀ ಹೊನ್ನಾದೇವಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಲಾ ತಂಡದ ಅಧ್ಯಕ್ಷ ಎಂ.ನಾಗರಾಜು, ಗೌರವಾಧ್ಯಕ್ಷ ಬೇಕರಿ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಎ. ನಾಗರಾಜು(ಪಾಪು), ಉಪಾಧ್ಯಕ್ಷ ಎಸ್.ಸಿದ್ದರಾಜು, ಸಂಚಾಲಕ ಎನ್.ದಿನೇಶ್ ಹಾಗೂ ಖಜಾಂಚಿ ಎಸ್.ಎಂ.ಚಿನ್ನಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net