

ಶಿರಸಿ: ಪಕ್ಷ ಸಂಘಟನೆ ಚುನಾವಣೆಗೆ ಮಾತ್ರ ಸೀಮಿತವಲ್ಲ. ಚುನಾವಣೆ ನಂತರದ ಸರ್ಕಾರದ ಸಾಧನೆಯನ್ನು ಮತದಾರರಿಗೆ ತಲುಪಿಸುವ ಜವಾಬ್ದಾರಿಯು ಕಾರ್ಯಕರ್ತರಲ್ಲಿ ಇರುತ್ತದೆ. ಪಕ್ಷದ ಸಂಘಟನೆ ನಿರಂತರವಾಗಿರಲಿ. ಬಿಜೆಪಿಯ ಜನ ವಿರೋಧಿ ನೀತಿಯ ವಿರುದ್ಧ ಸಂಘಟನಾತ್ಮಕ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಮಂಗಳವಾರ ಉತ್ತರ ಕನ್ನಡ ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸವಿಂಧಾನದಲ್ಲಿ ನಂಬಿಕೆ ಇಟ್ಟು ಸಮಾನತೆ ಮತ್ತು ಜಾತ್ಯತೀತ ಭಾವನೆಯಿಂದ ದೇಶವನ್ನು ಅಭಿವೃದ್ಧಿಯತ್ತ ಸಾಧಿಸುವ ಕಾರ್ಯ ಮಾಡಿದೆ. ಆದರೆ, ಬಿಜೆಪಿಯು ಧಾರ್ವಿುಕ ಭಾವನೆಯಿಂದ ಜನ ಸಾಮಾನ್ಯರನ್ನು ಕೆದಕಿ, ದೇಶದ ಏಕತೆಗೆ ಭಂಗ ತರುವ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವುದು ಖೇದಕರ. ಕೇಂದ್ರ ಬಿಜೆಪಿ ಸರ್ಕಾರ ಚುನಾವಣೆ ಆಯೋಗ, ಇಡಿ, ಸಿ.ಬಿ.ಐ, ಸಂಸ್ಥೆಯನ್ನು ವಿರೋಧ ಪಕ್ಷದ ನಾಯಕರ ಮೇಲೆ ಹತ್ತಿಕ್ಕುವ ಕಾರ್ಯ ಖಂಡನಾರ್ಹ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾವಂಕರ ಮಾತನಾಡಿ, ಜಿಲ್ಲೆಯಲ್ಲಿ ಕ್ರಿಯಾಶೀಲ ಕಾಂಗ್ರೆಸ್ ಕಾರ್ಯಕರ್ತರ ಪಡೆ ರಚಿಸಲು ಸನ್ನದ್ಧವಾಗಿದ್ದೇವೆ. ಮುಂದಿನ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಸದೃಢವಾಗಿ ಸಂಘಟಿಸಲಾಗುವುದು ಎಂದರು.
ರಾಜ್ಯ ಸಮಿತಿಯ ಉಪಾಧ್ಯಕ್ಷ ಮುನಿರ್, ಜೆ.ಡಿ. ನಾಯ್ಕ, ಸಂಯೋಜಕ ಶಂಭು ಶೆಟ್ಟಿ, ಕೋ ಆಡಿನೇಟರ್ ಜ್ಯೋತಿ ಪಾಟೀಲ, ಚಂದ್ರಶೇಖೃ ಪುತ್ತೂರು, ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕೀರ್ತಿ ಗಾವಂಕರ್ ಹಳಿಯಾಳ, ವೆಂಕಟೇಶ ಹೆಗಡೆ ಹೊಸಬಾಳೆ, ಹೊನ್ನಪ್ಪ ನಾಯ್ಕ ಕುಮಟಾ , ಅಭಾಸ್ ತೊನಸೆ, ರಾಜು ಉಗ್ರಾಣಕರ್, ನಾಗರಾಜ ಮಡಿವಾಳ ಮುಂತಾದವರುಇದ್ದರು. ಪ್ರಚಾರ ಸಮಿತಿಯ ಜಿಲ್ಲಾಧ್ಯ್ಯ್ಷ ರವೀಂದ್ರ ನಾಯ್ಕ ಸ್ವಾಗತಿಸಿದರು. ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ವಂದಿಸಿದರು.