ಸಂಘಟನೆ ಬಲಪಡಿಸಲು ಒತ್ತು ನೀಡಿ

10BLH5_Web
ಬೈಲಹೊಂಗಲ ಪಟ್ಟಣದ ಗಣಾಚಾರಿ ಕಾಲೇಜಿನ ಸಭಾಂಗಣದಲ್ಲಿ ಎಬಿವಿಪಿ ನಗರ ಅಭ್ಯಾಸ ವರ್ಗ ಜರುಗಿತು. ಡಾ.ಸಿ.ಬಿ.ಗಣಾಚಾರಿ, ಸಿ.ವಿ.ಜ್ಯೋತಿ, ರಮೇಶ ಯರಗಟ್ಟಿ, ಮಹಾಂತೇಶ ಮಟ್ಟಿ, ಗಂಗಾಧರ ತಿರಕಣ್ಣವರ ಇತರರು ಇದ್ದರು.
Published on

ಬೈಲಹೊಂಗಲ: ಪಟ್ಟಣದ ಗಣಾಚಾರಿ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಎಬಿವಿಪಿ ನಗರ ಅಭ್ಯಾಸ ವರ್ಗ ಜರುಗಿತು. ಡಾ. ಸಿ.ಬಿ.ಗಣಾಚಾರಿ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರದ ಶಕ್ತಿಯಾಗಿದ್ದು, ಸಂಘಟನೆಯನ್ನು ಬಲಪಡಿಸುತ್ತ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಒತ್ತು ನೀಡಬೇಕು ಎಂದರು. ಪದಾಧಿಕಾರಿಗಳಿಗೆ ಜವಾಬ್ದಾರಿ ಘೋಷಿಸಲಾಯಿತು. ಶೃದ್ಧಾ ಕಾಲೇಜ್ ಪ್ರಾಂಶುಪಾಲ ಸುಭಾಷ ಬಡ್ಲಿ, ವಿದ್ಯಾರ್ಥಿ ಪರಿಷತ್ ಹಿರಿಯರಾದ ನಿವೃತ್ತ ಪ್ರೊ.ಸಿ.ವಿ.ಜ್ಯೋತಿ, ಪ್ರಾಚಾರ್ಯ ಮಹಾಂತೇಶ ಮಟ್ಟಿ, ಎಬಿವಿಪಿ ತಾಲೂಕು ಪ್ರಮುಖ ರಮೇಶ ಯರಗಟ್ಟಿ, ಜಿಲ್ಲಾ ಸಂಚಾಲಕ ಉಲ್ಲಾಸ ಕಲ್ಲೂರ, ಸಿದ್ಧಾರೂಢ ಹೊಂಡಪ್ಪನವರ, ವಿಭಾಗೀಯ ಸಂಚಾಲಕ ರೋಹಿತ ಉಮನಾದಿಮಠ ಇತರರು ಇದ್ದರು.

ಎಬಿವಿಪಿ ನಗರ ಘಟಕದ ಅಧ್ಯಕ್ಷರಾಗಿ ಗಿರೀಶ ಹರಕುಣಿ, ಉಪಾಧ್ಯಕ್ಷರಾಗಿ ರಶ್ಮಿ ಪಾಟೀಲ, ಕಾರ್ಯದರ್ಶಿಯಾಗಿ ಗಂಗಾಧರ ತಿರಕಣ್ಣವರ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net